Monday, February 2, 2009

ಮಾಧ್ಯಮಗಳಿಗೆ ಧನ್ಯವಾದಗಳು...!




ಶ್ರೀರಾಮ ಸೇನೆ ರಾಜ್ಯ ಸಹ ಸಹಸಂಚಾಲಕ ಪ್ರಸಾದ್ ಅತ್ತಾವರ ಎರಡೂ ಕೈ ಜೋಡಿಸಿ ಮಾದ್ಯಮದವರಿಗೆ ಕೃತಜ್ನತೆ ಅರ್ಪಿಸಿದ್ದಾನೆ.
ಮಾದ್ಯಮಗಳ ಮುಂದೆ ಆತ ಹೇಳಿದ್ದು ಹೀಗೆ ”ಶ್ರೀರಾಮ ಸೇನೆ ಬರಿ ಕರ್ನಾಟಕದಲ್ಲಿತ್ತು. ಈಗ ಅದು ರಾಷ್ಟ್ರಮಟ್ಟಕ್ಕೆ ಬೆಳೆಯಿತು. ಪ್ರಚಾರ ಕೊಟ್ಟ ನಿಮಗೆಲ್ಲಾ ದನ್ಯವಾದಗಳು”

ಸಂಜೆ ಶ್ರೀರಾಮ ಸೈನದ ಸ್ಥಾಪಕ ಪ್ರಮೋದ್ ಮುತಾಲಿಕ ಕೂಡ ಇದನ್ನೇ ಪುನರುಚ್ಚರಿಸಿದರು. ಜಾಮೀನಿನ ಮೇಲೆ ಬಿಡುಗಡೆಗೊಂಡ ಅವರ ಮುಖದಲ್ಲಿ ವಿಜಯದ ನಗೆಯಿತ್ತು.

ಅವರ ಉದ್ದೇಶ ನೆರವೇರಿತ್ತು. ಅದರಲ್ಲಿ ಪಾಲುದಾರರಾದವರನ್ನು ಅವರು ಮರೆಯಲಿಲ್ಲ...!

ಪಬ್ ದಾಳಿಗೆ ಸಂಬಂಧಿಸಿದಂತೆ ಬಂದಿಸಲಾದ ೨೮ ಮಂದಿಗೆ ಶನಿವಾರ ಜಾಮೀನು ಸಿಕ್ಕಿದೆ. ಜೈಲ್ ನಿಂದ ವೀರ ಯೋದರ ತೆರದಲ್ಲಿ ಪೋಸ್ ಕೊಡುತ್ತಲೇ ಹೊರಬಂದ ಅವರು ಮರುದಿನ ಅಂದರೆ ಭಾನುವಾರ ಮಾದ್ಯಮದವರಿಗೆ ಕೃತಜ್ನತೆ ಸಲ್ಲಿಸಿದರು. ಆದರೆ ಮಾದ್ಯಮದವರು ಕನಿಷ್ಠ ಒಂದು ಸಾಲು ಕೂಡ ಛಾಪಿಸದೆ ಕೃತಘ್ನರಾದ್ರು.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೂಡ ಮಾರಾಟದ ಸರಕಾಗಿ ಕಾಣುತ್ತಿರುವ ಮಾದ್ಯಮದವರಿಗೆ ಅಬಿನಂಧನೆಗಳು. ನಿಮ್ಮ ಟಿಆರ್ ಪಿ ಹೆಚ್ಚಲಿ. ಪ್ರಸಾರ ಸಂಖ್ಯೆ ಮುಮ್ಮಡಿಗೊಳ್ಳಲಿ. ಪದ್ಮಪ್ರಿಯ ಮೇಲಿನಿಂದಲೇ ನಿಮ್ಮನ್ನೆಲ್ಲಾ ಹರಸಬಹುದು. ಅರುಷಿ ಪುಟ್ಟಿ ಟಾಟಾ ಮಾಡಬಹುದು.

ಶ್ರೀರಾಮ ಸೇನೆಯವರು ಪೆಬ್ರವರಿ ೧೪ರ ಪೇಮಿಗಳ ದಿನಾಚರಣೆಯನ್ನು ವಿರೋದಿಸುತ್ತಾರಂತೆ. ಅಂದು ಕೂಡ ಮಾದ್ಯಮದವರಿಗೆ ಫುಲ್ ಮೀಲ್ ಸಿಗಬಹುದು. ಸಂಸ್ಕೃತಿ ಉಳಿಸುವ ಈ ಕೈಂಕರ್ಯದಲ್ಲಿ ಜೊತೆಯಾಗುವ ಭಾಗ್ಯವೂ ದೊರಕೀತು..!

ಜೈ ಕನ್ನಡಾಂಬೆ

ಜೈ ಭಾರತ ಮಾತೆ.

6 comments:

sunaath said...

ನಮ್ಮ ರಾಜಕಾರಣಿಗಳನ್ನು, ನಮ್ಮ ಮಾಧ್ಯಮದವರನ್ನು ಕಂಡರೆ
ಹೇಸಿಗೆಯಾಗುತ್ತದೆ. ಇದನ್ನು ಪರಿಹರಿಸೋದು ಹೇಗೆ?

ಹರೀಶ್ ಕೇರ said...

ವ್ಯಂಗ್ಯದಲ್ಲಿ ಇರಿಯುವ ಬರಹ. ಆದರೆ ಶ್ರೀರಾಮಸೇನೆಗೂ ನಮ್ಮ ಮಾಧ್ಯಮಕ್ಕೂ ಎಷ್ಟು ದಪ್ಪ ಚರ್ಮ ಎಂದರೆ, ಈ ವ್ಯಂಗ್ಯ ಅವರಿಗೆ ಹೊಳೆಯುವುದಿಲ್ಲ.
- ಹರೀಶ್ ಕೇರ

ಪುರುಷೋತ್ತಮ ಬಿಳಿಮಲೆ said...

ಬ್ರಹ್ಮ ದೇವರು ಮಗಳನ್ನೇ ಮದುವೆಯಾದ. ಸೂರ್ಯ ಮತ್ತು ಅವನ ಮಗ ಯಮ ಒಂದೇ ಹೆಣ್ಣಿನಿಂದ ( ಕುಂತಿ) ಮಕ್ಕಳನ್ನು ಪಡೆದರು. ಇಂದ್ರ ಅಹಲ್ಯೆಯ ಗುಡಿಸಲಿಗೆ ನುಗ್ಗಿ ಅವಳ ಗಂಡನಿಲ್ಲದ ಸಮಯದಲ್ಲಿ ಅವಳೊಡನೆ ಮಲಗಿದ. ಯಮ ತನ್ನ ತಂಗಿಯನ್ನೇ ( ಯಮಿ) ಮದುವೆಯಾದ. ಕೃಷ್ಣ ನ ರಾಸಲೀಲೆ ಎಲ್ಲರಿಗೂ ತಿಳಿದದ್ದೇ, ರಾಮ ತನ್ನ ಹೆಂಡತಿ ಬೆಂಕಿಗೆ ಹಾರುವಂತೆ ಮಡಿದ. ಈಗ ಶ್ರೀರಾಮ ಸೇನೆ ಹಿಂದೂ ಸಂಸ್ಕೃತಿಯನ್ನು ಸಂರಕ್ಷಿಸಲು ಹೊರಟಿದೆ, ಜೈ ಶ್ರೀ ರಾಮ್

thandacool said...

ninne aste namma kacheriyalli matadikondevu mutaliknannu rastriya nayakara pattige serisuva kelasavannu madyamadavarada navu madidevalla? idakkinta duranta mattondu edeya endu? ndtv, timesnow vahinige madala sthana 2neyaddu barha madyamakke e kirti salluttade.

Unknown said...

who is this Harish kera ?
Is he a meadiman or sriramasena goon..?

Bilimale.
Rama, the notorious molester!
Remember Shurpanaka. What this ram and his Laxman did for her. Is it in Hindu culture. Are they(SRS) doing the smae and right according Rama and not Law of land.
Right ?

KANASU said...

ಅಕ್ಕರೆಯ ಡಾ. ಯು.ಆರ್.ಅನಂತಮೂತರ್ಿಯವರಿಗೊಂದು ಬಹಿರಂಗ ಮನವಿಪತ್ರ

'ನೀವೂ ಬಾಳಿ, ನಮ್ಮನ್ನೂ ಬದುಕಲು ಬಿಡಿ'



ನೆಲಕ್ಕಿಳಿಯದೇ ಸದಾ ಮೇಲೆ ಹಾರಾಡುವ ಸೂಕ್ಷ್ಮತೆ ಸಂವೇದನೆಗಳೆನಿಸಿಕೊಂಡ ಪೀಠಾಧಿಕಾರಿ ಸನ್ಮಾನ್ಯ ಶ್ರೀ ಅನಂತಮೂತರ್ಿಯವರಿಗೆ ಪ್ರೀತಿ ಗೌರವ ಪೂರ್ವಕ ನಮಸ್ಕಾರಗಳು.

ಬಹಳ ವರ್ಷಗಳಿಂದಲೂ ನಮ್ಮ ಪರಿಚಯ ನಿಮಗಿದೆ. ನಾನು ಶಾಂತಿನಗರದ ಅಪಾಟರ್್ಮೆಂಟ್ನಲ್ಲಿ, ಸಾಲುಮರದ ತಿಮ್ಮಕ್ಕನೊಂದಿಗೆ ಯವನಿಕಾದಲ್ಲಿ ನಡೆದ 'ಪರಿಸರ ಪ್ರಜ್ಞೆ ಕಥೆ-ವ್ಯಥೆ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ- ಇನ್ನೂ ಅನೇಕ ಸಂದರ್ಭಗಳಲ್ಲಿ ತಮ್ಮೊಂದಿಗೆ ಮಾತನಾಡುವ ಮಹಾಸೌಭಾಗ್ಯ ನನಗೆ ದೊರೆತಿತ್ತು. ನನಗೆ ಗೊತ್ತು ತಾವೀಗ ನೆನಪು ಮಾಸಿ ಹೋದವರಂತೆ ನಟಿಸುತ್ತೀರಿ, ಪರವಾಗಿಲ್ಲ. ವಿಷಯಕ್ಕೆ ಬರೋಣ; ನನ್ನ ಕೆಲವು ಪ್ರಶ್ನೆಗಳಿವೆ; ದಯಮಾಡಿ ಕೋಪಿಸಿಕೊಳ್ಳದೆ, ಸಿಡುಕದೆ ಯೋಚಿಸಿ, ಚಿಂತಿಸಿ ನಿಮ್ಮ ಬುದ್ಧಿವಂತಿಕೆಯ ಕಠಿಣತೆಯಲ್ಲ ಒಡಲ ಮೆದುವಲ್ಲಿ ಅಡಗಿರುವ ಘನ ಧಾವ್ನ ಉತ್ತರ ಕೊಡಿ.
ತಾವು ಸಮಾಜವಾದಿಗಳು. ಧೀಮಂತ ಶಾಂತವೇರಿ ಗೋಪಾಲಗೌಡರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ಬೇಕಾದಷ್ಟು ಬರೆದು ಎಲ್ಲವನ್ನೂ ಪಡೆದವರು. ಸ್ವಾಮಿ, ತಮಗೊಂದು ವಿಷಯ ನೆನಪು ಮಾಡುತ್ತೇನೆ. ಗೋಪಾಲಗೌಡರವರು ಚುನಾವಣೆಯಲ್ಲಿ ಸೋತು ಸಣ್ಣಮನೆಯ ಮೂಲೆ ಸೇರಿದ್ದಾಗ, ಮುಖ್ಯಮಂತ್ರಿಯೊಬ್ಬರು ಅವರಲ್ಲಿಗೆ ಹೋಗಿ 50000 ರೂಪಾಯಿಗಳ ಹಣನೀಡಲು ಹೋದಾಗ ಗೌಡರು ಹೇಳುತ್ತಾರೆ 'ತಾವು ಬಂದದ್ದು ನನಗೆ ತುಂಬಾ ಸಂತೋಷ, ನಾನಿನ್ನೂ ಬರಿದಾಗಿಲ್ಲ, ಈ ನಾಡಲ್ಲಿ ಯಾರ ಜೇಬಿಗೆ ಕೈ ಹಾಕಿದರೂ ಕನಕಾಂಬರಿಯ 20ರೂಪಾಯಿಯ ನೋಟು ಸಿಕ್ಕೇ ಸಿಗುತ್ತದೆ. ದಯಮಾಡಿ ತಪ್ಪ ತಿಳಿಯದೆ ನಿಮ್ಮ ದುಡ್ಡನ್ನು ವಾಪಸ್ಸು ತೆಗೆದುಕೊಳ್ಳಿ, ನೀವು ಬಂದಿರುವ ಪ್ರೀತಿಯನ್ನು ಬಿಟ್ಟುಹೋಗಿ.' ತದನಂತರ ಕಡಿದಾಳ್ಮಂಜಪ್ಪನವರು ಗೋಪಾಲಗೌಡರ ಬಳಿ ಹೋಗಿ 'ನಿಮ್ಮ ಬಳಿ ಏನೂ ಇಲ್ಲ, ಸಕರ್ಾರದಿಂದ ನಿಮಗೆ ಆರು ಎಕರೆ ಜಮೀನು ಕೊಡುತ್ತಿದ್ದೇವೆ ಒಪ್ಪಿಸಿಕೊಳ್ಳಿ' ಎಂದರು. ಅದಕ್ಕೆ ಮುಗುಳು ನಕ್ಕು ಗೋಪಾಲಗೌಡರು ಹೇಳುತ್ತಾರೆ, 'ಅಲ್ಲ ಕಣಯ್ಯ ಉಳುವವನೇ ಭೂಮಿಯ ಒಡೆಯ ಎಂದು ನಾನು ಸಾರಿಕೊಂಡಿರುವಾಗ ಈ ಭೂಮಿಯನ್ನು ನಾನು ಉಳುವುದಕ್ಕಾಗುತ್ತದೆಯೇ? ನನ್ನ ಮೇಲೆ ಯಾಕಪ್ಪ ನಿನಗೆ ಇಷ್ಟೊಂದು ಕೋಪ? ನೋಡು, ಆ ಬಾಗಿಲಲ್ಲಿ ಆರು ಜನ ಕಡು ಬಡವರು ನೋಡುತ್ತಿದ್ದಾರೆ, ಅವರಿಗೆ ಹಂಚಿಬಿಡು ಈ ಆರು ಎಕರೆ!' ಎಂದು.
ಇನ್ನೊಮ್ಮೆ ಎಮ್ಎಲ್ಎ ಆಗಿದ್ದವರುಗಳಿಗೆ ಬಿಡಿಎ(ಆ ಕಾಲದಲ್ಲಿ ಬಿಡಿಎಗೆ ಬೇರೆ ಹೆಸರಿತ್ತು) ನಿವೇಶನಗಳನ್ನು ಕೊಡುವ ಯೋಜನೆಯ ಸಂದರ್ಭದಲ್ಲಿ ಗೋಪಾಲಗೌಡರಿಗೂ ಕೊಡಲು ಹೋದರು. ಅದಕ್ಕೆ ಗೋಪಾಲಗೌಡರು 'ನನ್ನ ಪಾಲನ್ನು ತೆಗೆದಿಟ್ಟಿರಿ, ಮೊದಲು ನಾಡಿನ ಕಡುಬಡವರಿಗೆಲ್ಲ ನಿವೇಶನ ಕೊಡಿ. ನನ್ನ ಪಾಲನ್ನು ನಾನೇ ಬಂದು ತೆಗೆದುಕೊಂಡು ಹೋಗುವೆ'
ಸ್ವಾಮಿ ಅನಂತಮೂತರ್ಿಯವರೇ, ಆ ಪುಣ್ಯಾತ್ಮ ಗೋಪಾಲಗೌಡರು ಕೊನೆಗೂ ಪಾಲು ತೆಗೆದುಕೊಳ್ಳಲಿಲ್ಲ! ಅವರ ಒಡನಾಡಿಯಾದ ತಾವು ಸಮಾಜವಾದಿಯಲ್ಲವೇ? ರಾಜರೋಷವಾಗಿ ಮನೆಯಿದ್ದೂ ಬಿಡಿಎನ ಕಾನೂನು ಕಟ್ಟಳೆಗಳ ಮುರಿದು ನಿವೇಶನವೂ ಸಾಲದಾಗಿ ಕೋಟಿ-ಕೋಟಿ ಬೆಲೆ ಬಾಳುವ ಡಾಲರ್ಸ್ ಕಾಲೋನಿಯಲ್ಲಿ ಮನೆಯನ್ನ ಪಡೆದಿರುವಿರಿ. ತಮಗೆ ಆಸೆ ಅತಿ, ಅಂತಃಕರಣ ಕಮ್ಮಿ. ಈ ಗುಣದಿಂದಾಗಿಯೇ ಸಾವಿರಾರು ಸುಂದರ ಜೀವಿಗಳು ಇಂದು ನಾಮಾವಶೇಷಗೊಂಡಿವೆ. ಇನ್ನೂ ಸಾವಿರಾರು ಜೀವಿಗಳು ನಿನರ್ಾಮಗೊಳ್ಳುವ ಹಂತಕ್ಕೆ ಬಂದು ತಲುಪಿವೆ. ನಮಗೆ ಗೊತ್ತು ಈ ಬರಹ ನಮ್ಮನ್ನು ಕಾಡು ಪ್ರಾಣಿಗಳಂತೆ ಕಾಣಿಸುತ್ತದೆ. ಒಪ್ಪಿಕೊಳ್ಳುತ್ತೇವೆ, ನಾವು ಕಾಡಿನ ಪ್ರಾಣಿಗಳೇ. ನೀವು ತಿಳಿದಂತೆ ನಾವು ಯಾರಿಗೆ ಯಾರೂ ಶತ್ರುಗಳಲ್ಲ. ಆದರೆ, ನಾವೆಲ್ಲ ಸಾಮಾನ್ಯವಾಗಿ ಒಬ್ಬ ಪ್ರಾಣಿಗೆ ಹೆದರಿಕೊಳ್ಳುತ್ತೇವೆ. ಆ ಪ್ರಾಣಿ ಯಾರೆಂದಿರ? ತಮ್ಮಂತ ಮನುಷ್ಯರು.
ತಾವು ಕಲಾಪ್ರಿಯರು ಸಾಹಿತ್ಯ ಸಾರ್ವಭೌಮರು, ಹಾಗೂ ಉನ್ನತ ಪೀಠಾಧಿಪತಿಗಳು. ತಮ್ಮ ಶ್ರೇಷ್ಠ ಕಲಾವಂತಿಕೆಗಾಗಿ ನೊಂದು ಬೆಂದ ಜೀವಗಳನ್ನು ಬೇಟೆಯಾಡುವಿರಿ. 'ದುಷ್ಟಮೃಗಗಳ ಬೇಟೆ' ರಾಜನ ಪರಮಕರ್ತವ್ಯವನ್ನಾಗಿಯೂ ಸೂತ್ರೀಕರಿಸಿದ ಸಂವೇದನಾಶೀಲ ಸಾಹಿತಿ ನೀವು. ತಾವು ತಿಳಿದಂತೆ ಈ ನಾಡಲ್ಲಿ ಕಡುಬಡವರೆಲ್ಲಿದ್ದಾರೆ? ಹೇಳಿ. ಮುರುಕು ರೊಟ್ಟಿಯ ಚೂರಿಗಾಗಿ ಸಾವಿರಾರು ಅವ್ವಂದಿರು ಅಳುತ್ತಾ ಕುಳಿತಿದ್ದಾರೆ. ಬತ್ತಿದ ಎದೆಮೊಲೆಗೆ ಸಾವಿರಾರು ಮಕ್ಕಳು ಬಾಯೊಡ್ಡಿವೆ. ಘನತೆಯೊತ್ತ ತಾವು ನೀಟಾಗಿ ಟ್ರಿಮ್ ಮಾಡಿಸಿದ ಗಡ್ಡ ನೀವಿಕೊಳ್ಳುತ್ತ ಗರಿಗರಿಯಾದ ದೇಸಿ ಬಟ್ಟೆಯೊಂದಿಗೆ, ಡಾಲರ್ಸ್ ಕಾಲೋನಿಯಿಂದ ಮನುಕುಲ ಬೆಳಗುವ ಮಾತನಾಡಲು ಊರುಕೇರಿಗೆ ಬರುತ್ತೀರ. 'ಹಾಳಾದ್ದು ಇಲ್ಲಿ ಊರು ಊರೇ ಹಾಗಿದೆ, ಕೇರಿ ಕೇರಿಯಾಗುತ್ತಲೇ ಇದೆ' ಮುಂಚೆ ಊರ ಒಳಗಿದ್ದ ಕೇರಿ ಉರ ಹೊರಗಿದೆ. ಕಾನೂನು ಕಟ್ಟಳೆಗಳು, ಜನಪ್ರಿಯ ಯೋಜನೆಗಳು ನಯನಾಜೂಕಾಗಿ ಕೇರಿಯನು ಹೊರಕ್ಕಿಟ್ಟಿವೆ. ಇನ್ನೂ ನೀವು ಊರಿಗೆ ಬಂದರೂ ಕೇರಿಗೂ ಬಂದರೂ ಸುದ್ಧಿಯೋ, ಸುದ್ಧಿ. ತಾವೇ ಬಾಳುವ ಕಲೆ ತಮಗೇ ಚೆನ್ನಾಗಿ ಗೊತ್ತು. ತಮ್ಮ ಭಾಷಣಕೇಳಿ ನೋವುಂಡವರ ಮುಖದಲ್ಲಿ ನೋವಕಲೆ ಇನ್ನೂ ಹಾಗೇ ಇದೆ. ಹಾರಾಡುವ ನಿಮ್ಮ ಜೊತೆ ಕೂಡಲು ದಲಿತ, ಶೂದ್ರ ಮಂದಿಗೇನು ಕಮ್ಮಿಯಿಲ್ಲ ಬಿಡಿ. ಅವರೂ ನಿರ್ಧರಿಸಿದ್ದಾರೆ ಹಿನ್ನುಡಿ, ಮುನ್ನುಡಿ, ಬೆನ್ನುಡಿ ಬರೆಸಿಕೊಂಡು ಬರುವ ಇನ್ನೊಂದು ಕಾಲಕ್ಕೂ ತಮ್ಮನ್ನು ಸಾಹಿತ್ಯಲೋಕದ ಚಕ್ರವತರ್ಿಯನ್ನಾಗಿಸಲು. ನನ್ನದೇ ಒಂದೆರಡು ಸಾಲು ಪದ್ಯವೋ, ಗದ್ಯವೋ, ವಾಚ್ಯವೋ, ಪಾಚ್ಯವೋ ಗೊತ್ತಿಲ್ಲ: ಆ ಊರಿಗೇ ದೊಡ್ಡದಾದ ಅಸ್ತಿಪಂಜರವೊಂದು ಸಹಜ ಭಾವ ಭಾವನೆ ತೊರೆದು, ತನ್ನದೇ ಮಾಯಾ, ಮಂತ್ರ, ತಂತ್ರವ ಕಾಲನಾಗಿಸಿಕೊಂಡು ವೇಷ, ಭೋಗ, ಅನುಮಾನ, ಸೇಡು-ಕೇಡುಗಳನೇ, ಮನುಕುಲ ಬೆಳಗುವ ಬೆಳಗೆಂದು ಜಗಕೆ ಸಾರುತಾ ಬಾಳುತಿದೆ. ತಬ್ಬಲಿ ಹಸಿವಿನ ಜೇಡ ಬದುಕ ಗೂಡ ಹೆಣೆಯಲು ಅದು ಜಾಗಕೊಡುವುದೇ?

ತಾವು ಅಭಿನವ ಪ್ರಕಾಶನದ 'ಮಾತುಸೋತ ಭಾರತ'ದಲ್ಲಿ ತಾವು ಪಡೆದ ಬಿಡಿಎ ನಿವೇಶನ ನಂತರದ ಕೋಟಿ-ಕೋಟಿ ಬೆಲೆಬಾಳುವ ಡಾಲರ್ಸ್ ಕಾಲೋನಿ ಮನೆ ಕುರಿತು ತಮ್ಮ ಮನದಾಳದ ಮಾತುಗಳಲ್ಲಿ ಪಿ.ಲಂಕೇಶ್, ಡಾ. ಜಿ.ರಾಮಕೃಷ್ಣ ಸತ್ಯ ಅರಿಯದೇ ತಮ್ಮ ವಿರುದ್ಧ ಕಿಡಿ ಕಾರಿರುವರೆಂದು ಬರೆದುಕೊಂಡಿದ್ದೀರಿ. ಸ್ವಾಮಿ, ಲೋಕಸಂಸಾರಿ ಡಾ.ಜಿ.ಆರ್ ಎಲ್ಲಿ? ನೊಂದು ಬೆಂದವರ ಕತ್ತಲ ಬದುಕಿಗೆ ಬೆಳಕಾದ ಲಂಕೇಶ್ ಎಲ್ಲಿ? ಸತ್ಯವ ಅರೆದು, ಕುಡಿದು ನೀಟಾಗಿ ಬಡವರ ಬೋಳಿಸುವ ತಮ್ಮ ದಾಡಿಯಂತೆ ತಮ್ಮ ಬರವಣಿಗೆಯೂ ನನಗೆ ಕಾಣಿಸುತ್ತಿದೆ. ಸತ್ಯವ ಬಗೆದರೆ ನಮ್ಮ ದುರಾದೃಷ್ಟ ನೋವಿನಿಂದ ನೋಡಿದರೆ ತಾವು ಅಸ್ತಿಪಂಜರವಾಗಿ ಬಿಡುತ್ತೀರ.

ನಮ್ಮ ಅವ್ವನ ಆಣೆಗೂ ಹೇಳುತ್ತೇನೆ ತಾವೆಂದರೆ ನನಗೆ ಬಹಳ ಇಷ್ಟ. ಯಾಕೆಂದರೆ ತಾವು ಪೂತರ್ಿ ಕೆಟ್ಟವರಲ್ಲ. ಬೇರೆಬೇರೆ ಸ್ತರಗಳಲ್ಲಿ ಒಂದಿಷ್ಟು ಒಳಿತನ್ನೂ ಮಾಡಿದ್ದೀರಿ. ತಮ್ಮ ಬಾಳು ಬರಿ ಸಪ್ಪೆಯಲ್ಲ ಅದಕ್ಕೆ ಒಂದುಕಲ್ಲು ಉಪ್ಪಾಕಿದ್ದೇನೆ. ಎಸ್ತರ್ ಅವ್ವನ ಜೊತೆ ತಮ್ಮ ಬಾಳು ನಮಗೆ ಸ್ಪೂತರ್ಿ. ಡಾಲರ್ಸ್ ಕಾಲೋನಿ ಮಾತ್ರ ನಮಗೆ ನೋವಾಗಿ ಒಂದು ಪದ್ಯವೋ, ಗದ್ಯವೋ ಹೊರಬಂದಿದೆ ಸಾಧ್ಯವಾದರೆ ಓದಿ:





ಮುಖದ ಆದೇಶ ಮೀರಿ ಬಾಲ ಅಲುಗಿತ್ತು

ಸಂಸ್ಕೃತಿ, ಇತಿಹಾಸ, ಪದ, ಪದಾರ್ಥ, ಅಕ್ಷರ, ಧರ್ಮ, ಪಕ್ಷ, ರಾಜಕೀಯದ ನಡುವೆ ನಿಂತ ಆನೆ-ಅಂಬಾರಿಗಳು ಅವುಗಳ ಬೆನ್ನಮೇಲೆ ಹೊಳೆವ ಚಿನ್ನದ ಛತ್ರಿ. ಅದರ ನೆರಳ ಕೆಳಗೆ ಯಾವುದೋ ನಾಟಕದ ಪಾತ್ರಗಳಂತೆ, ಪಾತ್ರದ ವೇಷ ಧರಿಸಿದ ತಾವು.
ಮೆರವಣಿಗೆಯ ಸುತ್ತ ನೀವು ಹೇಳಿದ್ದನ್ನೇ ಸತ್ಯವೆಂದು ನಂಬಿದವರ ಉಘೇ, ಉಘೇ, ಉಘೇ ಜೈಕಾರ. ಮುಗ್ಧ ಜನರ ಮುಖಭಾವದಲಿ ಮೂಡಿದೆ ಕನ್ನಡಿಯೊಳಗಿನ ಸಾಹಿತ್ಯಗಂಟಿಗೆ ಕೈ ಚಾಚಿ ನಿಂತ ಸಾಲು ಸಾಲು ಜನರ ಕಡೆದಿಟ್ಟ ಭಿತ್ತಿಚಿತ್ರ. ಪೀಠದ ಕತ್ತಿ ಹಿರಿದರಷ್ಟಕ್ಕೇ ರಾಜನಾಗಬಹುದೇ? ಬಡಜನರ ರಕ್ಷಣೆಯ ಸೂತ್ರ ನಿಮ್ಮಲ್ಲಿದೆಯೇ? ಪದಾರ್ಥ, ರಾಜಕೀಯ, ವಿದ್ಯೆ, ಧರ್ಮಗಳು ತಮಗೊಂದು ರಾಜಪ್ರಭಾವಳಿ ಒದಗಿಸಿವೆ ಅಲ್ಲವೇ? ರಾಜನೆಂದ ಮೇಲೆ ಮುಂದೆ ಬೆಳಕು ಹಿಂದೆ ಕತ್ತಲು, ಕತ್ತಲೊಳಗೆ ಮಡುಗಟ್ಟಿ ಹರಿವ ರಕ್ತ. ಡಾಲರ್ಸ್ ಕಾಲೋನಿ ರಾಜನಿಗೆ ಇದಲ್ಲ ಸಾಮನ್ಯ ಸಂಗತಿ. ಹಗಲು ಬಿಳಿ ಪಾರಿವಾಳಗಳ ಹಾರಿಸಿ, ರಾತ್ರಿ ಅವುಗಳತ್ತ ಕವಣೆ ಕಲ್ಲುಗಳ ಬೀಸಿದಂತೆ ಬದುಕು ಬರವಣಿಗೆಯ ಬೇರೆ ಬೇರೆ ಮಾಡಿದಿರಿ. ನಿಮ್ಮ ಗೆಲುವಿನ ರಹಸ್ಯ ನೀವು ನಡೆದು ಹೋಗುತ್ತಿರುವ ಹೆಜ್ಜೆ ಗುರುತುಗಳ ಕೆಳಗೆ ಹೀಗೆ ಕಠಿಣಗೊಂಡಿದೆ. ಜನರಿಗೆ ನಿಮ್ಮ ವಿಷಯವನ್ನು ಸತ್ಯವೆಂದು ನಂಬಿಸಲೋದಿರಿ. ಸಾಧ್ಯವಾಗದಾದಗ ನಿಮ್ಮ ವಿಷಯ ಹೇಳುವುದರ ಮೂಲಕ ಅವರ ವಿಷಯದ ದಾರಿ ತಪ್ಪಿಸಿ ಗೆಲುವು ನಿಮ್ಮದಾಗಿಸಿಕೊಂಡಿರಿ.
ತಾವು ಆಥರ್ಿಕವಾಗಿಯೂ, ಸಾಮಾಜಿಕವಾಗಿಯೂ ತುಂಬಾ-ತುಂಬಾ ಮೇಲ್ಸ್ತರದಲ್ಲಿದ್ದೀರಿ. ಯೂನಿವಸರ್ಿಟಿ, ಅಕಾಡೆಮಿ, ಸಂಸ್ಥೆಗಳು ಯಾವುದನ್ನೂ ಬಿಟ್ಟುಕೊಟ್ಟವರಲ್ಲ. ನೊಂದು ಬೆಂದವರ ಕುರಿತು ಮಾತನಾಡುವ ತಾವು ಸಿಕ್ಕ ಎಲ್ಲ ಸ್ಥಾನಗಳನ್ನೂ ನಿಸ್ಸಂಕೋಚವಾಗಿ ಸ್ವೀಕರಿಸುತ್ತೀರಿ. ಕನರ್ಾಟಕ, ಇಂಡಿಯಾ ಹಾಗೂ ಇಡೀ ವಿಶ್ವದ ವಕ್ತಾರರು ತಾವೇ ಆಗಿದ್ದೀರ ಎಲ್ಲಿ ಹೋದರೂ ತಮ್ಮ ಮೂತರ್ಿಯ ಆರಾಧನೆ ನಡೆದೇ ಇರುತ್ತದೆ. ಬಿಟ್ಟು ಕೊಡುವುದರಲ್ಲಿ ಬಾಳಿಸುವ ಕಲೆ ತಮ್ಮಿಂದ ದೂರಾಗಿದೆ. ಇನ್ನೊಂದು ವಿಷಯ ರಾಷ್ಟ್ರೀಯ, ಅಂತರರಾಷ್ಟ್ರೀಯ ಸಭೆ ಸಮಾರಂಭಗಳಲ್ಲಿ ಯಾರಾದರೂ ತಮಗೆ ನಿಮ್ಮ ನಾಡಲ್ಲಿ ಚೆನ್ನಾಗಿ ಬರೆಯುವ ಅಂತಃಸತ್ವವುಳ್ಳ ಮಂದಿಯ ಹೆಸರೇಳಿ ಅಂದರೆ; 'ಯಾರೂ ಇಲ್ಲ' ಎಂದೇಳಿ ನಿಮ್ಮ ಪೀಠವನ್ನು ಬಲು ಭದ್ರವಾಗಿಸಿಕೊಳ್ಳುತ್ತೀರ. ಸದಾ ಚಾಲ್ತಿಯಲ್ಲಿರಬೇಕಲ್ಲ ನಿಮ್ಮ ಚಕ್ರವತರ್ಿ ಪಟ್ಟ. ಕೊಡುವುದರಲ್ಲಿ ಪಡೆವ ಸುಖ ಕಾಣಿ ಸ್ವಾಮಿ.
ಇನ್ನೊಂದು ವಿಷಯ ತಮ್ಮ 'ಸಂಸ್ಕಾರ' ಕಾದಂಬರಿ ಹಾಗೂ ಚಲನಚಿತ್ರ ಕುರಿತದ್ದು; ಒಮ್ಮೆ ಶಾಂತವೇರಿ ಗೋಪಾಲಗೌಡರು ಅವರಷ್ಟೇ ಧೀಮಂತ ವ್ಯಕ್ತಿತ್ವವುಳ್ಳ ಮೌನದಲ್ಲೇ ರಾಜಕಾರಣದ ಧ್ಯಾನ ಮಾಡುತ್ತಿರುವ ಕೆ.ಎಚ್.ರಂಗನಾಥ್ರವರು ಸಂಸ್ಕಾರ ನೋಡಿದರಂತೆ; ಗೌಡರು 'ರಂಗನಾಥ ಪರವಾಗಿಲ್ಲ ಅಲ್ವೇನೊ? ಅಂದರಂತೆ ಅದಕ್ಕೆ ರಂಗನಾಥ್ ಅವರು ಹೆಳಿದರಂತೆ 'ಏನೋ ಸರ್ ನನಗಿಷ್ಟವಾಗಿಲ್ಲ. ಭೋಗ ಕ್ರಾಂತಿಯಾಗಬಾರದು ಕೊನೆ ಕೊನೆಗೆ ಬ್ರಾಹ್ಮಣ್ಯ ನೋಡಿ, ಆಳದಲ್ಲಿ ಉಳಿದೇ ಬಿಡುತ್ತದೆ. ಚಂದ್ರಿ ನನಗರ್ಥವಾಗಿದ್ದಾಳೆ. ನನ್ನ ಮಂದಿಗಿನ್ನೂ ಅರ್ಥವಾಗಿಲ್ಲ. ಕಾಲ ಅರ್ಥವಾಗಿಸುತ್ತದೆ' ಎಂದು. ಅದಕ್ಕೆ ಗೌಡರು 'ನಿಂದು ಪೂರ್ವಗ್ರಹ ಅನ್ನಿಸುತ್ತದೆ. ಬಾ ಇನ್ನೊಮ್ಮೆ ಸಂಸ್ಕಾರ ನೋಡೋಣ' ಎಂದು ಕರೆದುಕೊಂಡು ಹೋದರಂತೆ. ಮತ್ತೊಮ್ಮೆ ನೋಡಿ 'ಯಪ್ಪಾ ರಂಗನಾಥ, ನಾವು ಎಷ್ಟು ಮೋಸ ಹೋದೆವು, ನಾಜೂಕಾಗಿ ಎಂಥ ಎಡವಟ್ಟು ಮಾಡಿರುವನು. ಕಷ್ಟ, ಕಷ್ಟ' ಎಂದೇಳಿ ನೊಂದು ಕೆ.ಎಚ್.ರಂಗನಾಥ್ರವರ ಮೌನದ ಆಳದಲ್ಲಿರುವ ಮಾತುಗಳಿಗೆ ದನಿಯಾದರಂತೆ. ತಾವೊಮ್ಮೆ ತಮ್ಮ ಸಂಸ್ಕಾರವನ್ನು ಮತ್ತೆ ಓದಿ ನೋಡಿ. ಸತ್ಯ ನಿಮಗೇ ಗೊತ್ತಾಗುವುದು. ಅದನ್ನಾದರೂ ದಾಖಲಿಸಿ.
ಇನ್ನೊಂದು ವಿಷಯ ಬಿಟ್ಟುಕೊಡುವ ಬಗ್ಗೆ:
ಒಬ್ಬ ಮುಖ್ಯಮಂತ್ರಿಯ ಒಡನಾಟ ನನಗಿತ್ತು. ಅವರೂ ಕೆ.ಎಚ್.ರಂಗನಾಥರು ತಮ್ಮ ಸಂಪುಟದಲ್ಲಿ ಸಲಹೆ ಸೂಚನೆ ನೀಡುವ ಸಲುವಾಗಿ ಸ್ವತಃ ಅವರೇ ಕಾರು ಚಾಲನೆ ಮಾಡಿಕೊಂಡು ಹೋಗಿ ಒಪ್ಪಿಸಿದರಂತೆ. ನಾನು ವಿಧಾನಸೌಧದಲ್ಲಿ ಈ ಮುಖ್ಯಮಂತ್ರಿಯ ಜೊತೆಯಲ್ಲಿಯೇ ಇರುವಾಗ ಒಂದನ್ನು ಗಮನಿಸುತ್ತಿದ್ದೆ. ಅದೇನೆಂದರೆ; ಮುಖ್ಯಮಂತ್ರಿಯ ಕಾಣಲು ಕೆ.ಎಚ್.ರಂಗನಾಥ್ ಅವರು ಬರುವಾಗ ಗಜಗಾಂಭಿರ್ಯದಂತೆ ನಡೆದು ಬರುತ್ತಿದ್ದರು. ಮುಖ್ಯಮಂತ್ರಿಯ ಕೋಣೆಯಲ್ಲಿ ಖಗರ್ೆ, ಧರಮ್ಸಿಂಗ್, ಪಾಟೀಲ್, ಶ್ರೀಕಂಠಯ್ಯ ಮುಂತಾದ ಘಟಾನುಘಟಿಗಳಿಗೂ ಮುಖ್ಯಮಂತ್ರಿಯವರು ಮುಖ್ಯಮಂತ್ರಿ ಕುಚರ್ಿಯಲ್ಲಿಯೇ ಕುಳಿತು ಮಾತನಾಡುತ್ತಿದ್ದರು. ಆದರೆ ರಂಗನಾಥ್ ಅವರು ಬಂದರೆ ಆ ಕುಚರ್ಿಬಿಟ್ಟು ಪಕ್ಕದ ಸೋಫಾದಲ್ಲಿ ಮಾತನಾಡುತ್ತಿದ್ದರು. ಇದು ನಾನು ಬಹಳಷ್ಟ ಸಾರಿ ಕಂಡ ಚಿತ್ರಣ. ನನಗೆ ಈ ಕುರಿತು ದಿನದಿನವೂ ಕುತೂಹಲ. ಯಾಕೇ? ಹೀಗೆ ಎಂಬ ಪ್ರಶ್ನೆ. ಕೊನೆಗೆ ಉತ್ತರ ಸಿಕ್ಕಿತು. ಅದೇನು ಗೊತ್ತೆ? ಇಂದಿರಾಗಾಂಧಿಯವರ ಬಳಿ ವಿಸéಿಟಿಂಗ್ ಕಾಡರ್್ ಇಲ್ಲದೇ, ಅಪಾಯಿಂಟ್ಮೆಂಟ್ ಇಲ್ಲದೇ ಭೇಟಿಯಾಗುವ ಧೀಮಂತ ವ್ಯಕ್ತಿತ್ವ ಸಮಾಜದಲ್ಲಿ ಇನ್ನೂ ಸಾಮಾಜಿಕ ತಾಪ ಅನುಭವಿಸುತ್ತಿರುವ ಕೆ.ಎಚ್.ರಂಗನಾಥ್ ಅವರಿಗಿತ್ತು. ಒಮ್ಮೆ ಕೆ.ಎಚ್.ರಂಗನಾಥ್ರವರು ಮತ್ತು ನನಗೆ ಪರಿಚಯವಿದ್ದ ಆ ಮುಖ್ಯಮಂತ್ರಿಯೂ ಇಂದಿರಾಗಾಂಧಿಯವರ ಬಳಿ ಹೋದರಂತೆ. ಆಗ ಇಂದಿರಾಗಾಂಧಿಯವರು 'ಮಿಸ್ಟರ್ ರಂಗನಾಥ್, ನನಗೆ ಅರಸು ವಿಷಯದಲ್ಲಿ ತುಂಬಾ ಬೇಸರವಾಗಿದೆ. ಪಯರ್ಾಯ ವ್ಯಕ್ತಿಗಾಗಿ ಯೋಚಿಸಿದ್ದೇನೆ' ಒಂದು ನಿಮಿಷ ಮೌನವಾಗಿದ್ದ ರಂಗನಾಥ್ ಅವರು 'ಆಲ್ಟ್ನರ್ೆಟೀವ್ ಪರ್ಸನ್ ಯಾರು ಮೇಡಂ?' ಎಂದು ಕೇಳಿದರಂತೆ. ಅದಕ್ಕೆ ಇಂದಿರಾಗಾಂಧಿ ಅವರು 'ಐ ಯಾಮ್ ಥಿಂಕಿಂಗ್ ಆಫ್ ಯೂ' ಅಂದರಂತೆ. ತಕ್ಷಣವೇ ಕೆ.ಎಚ್.ರಂಗನಾಥ್ ಅವರು 'ನಾನಿನ್ನೂ ಆ ಅಸ್ಪೃಶ್ಯತೆಯ ತಾಪವನ್ನು ಅನುಭವಿಸುತ್ತಲೇ ಇದ್ದೇನೆ. ಇದರೊಂದಿಗೆ ಮುಂದೆ ಮಿತ್ರದ್ರೋಹಿ ಎಂಬ ಹಣೆ ಪಟ್ಟಿ ಹೊತ್ತ ಇತಿಹಾಸದ ಕಪ್ಪುಚುಕ್ಕೆಯಾಗಲಾರೆ. ಐ ಯಾಮ್ ವೆರಿ, ವೆರಿ ಸಾರಿ ಮೇಡಂ' ಎಂದೇಳಿ ಹೊರಬಂದರಂತೆ.
ಒಡಲವ್ಯಕ್ತಿತ್ವದ ಪಿ.ಲಂಕೇಶ್ರನ್ನು ಲಘುವಾಗಿ ಕಾಣುವ ತಾವು ಸ್ನೇಹದ ಬಗ್ಗೆ ಒಂದು ಸಂಗತಿ ತಿಳಿಯಬೇಕಾಗಿದೆ. ಮುಖ್ಯಮಂತ್ರಿಯಾಗಿದ್ದ ದೇವರಾಜಅರಸು ಅವರು ನಡುರಾತ್ರಿಯಲಿ ರಂಗನಾಥ್ರಿಗೆ ಫೋನ್ ಮಾಡಿ ಅಳುತ್ತಾ ಒಂದು ಕೇಳಿದರಂತೆ; 'ರಂಗನಾಥರವರೆ, ನಾನು ಬಾಲ್ಯದಲ್ಲಿ ಕಡುಬಡವನಾಗಿದ್ದಾಗ ಉಣ್ಣಲು, ಉಡಲು ಏನೂ ಸಿಗುತ್ತಿರಲಿಲ್ಲ. ನಡುರಾತ್ರಿ ಮಡಿಕೆ ತಳದ ಸೀಕನ್ನು ಸಲೀಸಾಗಿ ಬಿಡಿಸಿಕೊಳ್ಳುವ ಸಲುವಾಗಿ ಹಿಟ್ಟು ಬೇಯಿಸಿದ ಮಡಿಕೆಗೆ ನೀರ ತುಂಬಿಸಿ, ಬೆಳ್ಳಂಬೆಳಗ್ಗೆ ಹೊಟ್ಟೆ ಚುರುಗುಟ್ಟಿದಾಗ ಮಡಿಕೆಯ ನೀರಿಗೆ ಕೈ ಹಾಕಿ ಸಲೀಸಾಗಿ ಸೀಕ ಬಿಡಿಸಿಕೊಂಡು ಗಬಕ್ಕನೇ ತಿಂದುಬಿಡುತ್ತಿದ್ದೆ.' ಈ ಕಥೆ ರಂಗನಾಥರ ಅರಸುರವರ ಮೈತ್ರಿ ಘನ ಸ್ನೇಹವಾಗಿ ರಂಗನಾಥ್ರವರು ಮುಖ್ಯಮಂತ್ರಿ ಪಟ್ಟ ಧಿಕ್ಕರಿಸಿದರು. ಅದಕ್ಕೆ ನನಗೆ ಈ ಕತೆಗಳು ಕಾಡುತ್ತವೆ. ತಾವು ತಲೆಯಿಂದ ಬರೆದ ಅನುಮಾನ, ಸಂಶಯಗಳ ಬರಹಗಳೆಲ್ಲವೂ ಕಾಲ ಕಾಲಕ್ಕೆ ಅರ್ಥವಾಗಿಲ್ಲವೇನೋ! ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಬದಲಾಗುವ ಕಾಲದಲ್ಲಿ ಮೈಚರ್ಮ ಒಡೆದು ಉದುರಿ ಬೀಳುವ ತಡವತೊಟ್ಟುವಿನಂತೆ ಒಳಗಿಳಿಯದೇ ಉದುರಿಹೋಗುತ್ತಿದೆ. ತುಂಬಾ, ತುಂಬಾ ದುಃಖವೂ ಆಗುತ್ತಿದೆ. ತಾವು ಮತ್ತು ತಮ್ಮ ಬರವಣಿಗೆ ನಮ್ಮ ಒಳಗಿಳಿಯಬೇಕು. ಆ ಕಾಲದ ತಮ್ಮ ಪದಾರ್ಥವಲ್ಲದ ಪ್ರಸಾದದ ಕಾಯಕಕ್ಕಾಗಿ ಕಾಯುತ್ತಲೇ ಇರುವೆ. ನಿಜವಾದ ಗುರುವಾದವನು ಶಿಷ್ಯನ ಸೃಷ್ಟಿಸುವುದಿಲ್ಲ. ಗುರುವನ್ನೇ ಸೃಷ್ಟಿಸುತ್ತಾನೆ. ಪದಾರ್ಥವ ಕೈಬಿಟ್ಟು ಪ್ರಸಾದ ಕೊಡುವ ಆ ನಿಜವಾದ ಗುರು ನೀವಾಗಬೇಕೆಂಬುದೇ ನನ್ನ ಆಸೆ ಮತ್ತು ಕನಸು ಕೂಡ.
ಸನ್ಮಾನ್ಯ ಶ್ರೇಷ್ಠ ಸಾಹಿತಿ ಸನ್ಮಾನ್ಯ ಶ್ರೀ ಅನಂತಮೂತರ್ಿಯವರೇ ಸತ್ಯದ ವಿಷಯ ಹೇಳಿದ್ದಕ್ಕೆ ತಮಗೆ ಸಿಟ್ಟು ಬಂದಿರುವುದಕ್ಕೆ ನಾವು ಹೊಣೆಗಾರರಲ್ಲ. ಸತ್ಯವೇ ಹೊಣೆಯ ಹೊರುವುದು. ಆದರೂ ತಾವು ಖಂಡಿತವಾಗಿಯೂ ಒಂದಲ್ಲ ಒಂದು ದಿನ ಸತ್ಯಕ್ಕೆ ತಲೆಬಾಗಿ ಡಾಲರ್ಸ್ ಕಾಲೋನಿ ಮನೆಯ ಕಡುಬಡವರಿಗೆ ಹಂಚಿಬಿಡುವಿರೆಂದು ಅಂಗಲಾಚಿ ಧೈನ್ಯತೆಯಿಂದ ತಮ್ಮ ಶಿರಕ್ಕೆ ತಲೆಬಾಗಿ ಕೋರುತ್ತೇನೆ. ನನ್ನಿಂದ ತಮ್ಮ ಮನಸ್ಸಿಗೆ ನೋವಾಗಿದ್ದರೆ, ತಮ್ಮ ಒಡಲಿಗೆ ಒಪ್ಪಿಸಿಕೊಳ್ಳಿ. ತಮ್ಮಲ್ಲಿ ಕಳೆದು ಹೋಗಿರುವ ತಾಯ್ತನದ ಪ್ರೀತಿಯನ್ನು ಕೋರಿ ತಮ್ಮೊಂದಿಗೆ ನಾನೂ ಬಾಳುವ ಸಲುವಾಗಿ ಕೂಸಾಗಿ ಕ್ಷಮೆಯಾಚಿಸುವೆ. ಹೇಳಲಿಕ್ಕೆ ಇನ್ನೂ ಬೇಕಾದಷ್ಟಿದೆ. ಸದ್ಯಕ್ಕೆ ಇಷ್ಟು ಸಾಕು. ತಾವು ತಾಯಿಯಾಗದಿದ್ದರೆ; ಅಂಕಿ-ಅಂಶ, ಸತ್ಯಗಳೊಂದಿಗೆ ಆ ಕೋಟರ್್ನ ಮೆಟ್ಟಿಲು ಹತ್ತಲು ಕೂಸಾಗಿ ಸಿದ್ಧನಿರುವೆ. ದಯಮಾಡಿ ತಪ್ಪುತಿಳಿಯಬೇಡಿ ನೊಂದುಕೊಳ್ಳಬೇಡಿ. ನೀವು ಮತ್ತು ಎಸ್ತರ್ ಅವ್ವ ಚೆನ್ನಾಗಿರಬೇಕು. ನೀಷೆಗೆ ಹೊಳೆದ ಸತ್ಯ ತಮಗೆ ಗೊತ್ತು 'ಯಾವುದೇ ಪ್ರತಿಭಾಶಾಲಿಯಲ್ಲಿ ಕೃತಜ್ಞತೆ, ಪ್ರಾಮಾಣಿಕತೆ, ತಾಯ್ತನ ಇಲ್ಲವಾದರೆ ಆತನನ್ನು ಸಹಿಸಿಕೊಳ್ಳುವುದು ಬಲು ಕಷ್ಟದ ಕೆಲಸ' ಇದಕ್ಕಾಗಿಯೇ ಇಷ್ಟೆಲ್ಲಾ.
ಕೊನೆಯದಾಗಿ,
ನೀ ಕೈ ಬಿಟ್ಟಾಗ ನನ್ನೊಳಗಿಳಿದ ನಿಶೆ
ಸಾವಲ್ಲೂ ಜಗವ ಬಾಳುವುದು.
-ಇಂತಿ ಪ್ರೀತಿ ಗೌರವಗಳೊಂದಿಗೆ
ನಿಮ್ಮವ
ನಾಗತಿಹಳ್ಳಿ ರಮೇಶ