Friday, September 28, 2012

ಬದುಕ ಪಯಣಕ್ಕೆ ಯಾವುದು ದ್ರುವತಾರೆ?


ಮಾತು ಭಾರವಾದ ಹೊತ್ತು..

ಮಂಡಿಯೂರಿ ಕುಳಿತಿದ್ದೇನೆ, ಮುಖಕ್ಕೆ ಅಂಗೈಯ ರಕ್ಷಣೆ;

ಎಷ್ಟೊಂದು ಮಾತಾಡಿಬಿಟ್ಟೆ!
ನಾಚಿಕೆಯಾಗುತ್ತಿದೆ;ಎಲ್ಲವನ್ನೂ ಮುಗಿಸಬೇಕಾಗಿದೆ.
ಇನ್ನು ಹೊರಡುವ ಸಮಯ.
ಅತೃಪ್ತತೆಯ ವಿಷಾಧಯೋಗದ ಚಲನೆ.

ಅನಂತ ಆಕಾಶದೆಡೆಗೆ ಎರಡೂ ಕೈಚಾಚಿ ನಿಂತಿದ್ದೆ;

ಒಂದೇ ಒಂದು ಮಿಂಚು. ಕಂಡ ಮುಖ ಶಾಶ್ವತ;
ಒಪ್ಪಿ, ಹಂಬಲಿಸಿ, ಅಪ್ಪಿ,ಒಳಗೆಲ್ಲಾ ಜೀಕಾಡಿ..
ಕಣಕಣದಲ್ಲೂ ಮಿಂಚು ಸಂಚಾಗಿ ಸಂಚರಿಸಿ
ನನ್ನದೆನ್ನುವ ಲಯದಲಿ ತಾಳ ತಪ್ಪಿದ ಭಾವ.

ಭೂಮಿಯ ಪರಿಭ್ರಮಣಕ್ಕೆ ಬೆಳಕಿನೊಡೆಯನದೇ ಕುಮ್ಮಕ್ಕು;

ಆಸೆಬುರುಕಳು ನಾನು, ಬೀಳಲೇ ಬೇಕಾಗಿತ್ತು
 ಬಿದ್ದೆ; ಇನ್ನೆಂದೂ ಏಳಲಾರದಂತೆ.
ಕಳೆದುಕೊಂಡದ್ದಕ್ಕೆ ಋಣಭಾರದ ಸಂಕಟವಿಲ್ಲ
ನನ್ನ ತಲೆಯಡಿಗೆ ನನ್ನದೇ ಕೈದಿಂಬು.

ಸ್ವರ್ಗದಲ್ಲಿ ದೇವಗಂಗೆ, ನರಕದಲಿ ಅವಳೇ ವೈತರಣಿ;

ಮುಖವಾಡಗಳ ಸಂತೆಯಲಿ ಸಹಸ್ರಾರು ಜಿಹ್ವೆಗಳು
ವಾಸುಕಿಯ ವಜ್ರಕ್ಕೆ  ಕಾರ್ಕೋಟಕ ವಿಷದ ಬೇಲಿ.  
ಪುಣ್ಯ ಕೈಚಾಚಲಿಲ್ಲ, ಬಂಧ ಬೆಸುಗೆಯಾಗಲಿಲ್ಲ.
ಪೂರ್ಣಾಹುತಿಯಲ್ಲಿ ಅವತರಿಸಿತು ಆ ವಿಶ್ವಾಮಿತ್ರ ಹಸ್ತ!
.
ಬದುಕ ಪಯಣಕ್ಕೆ ಯಾವುದು ದ್ರುವತಾರೆ?

ಕತ್ತಲಲ್ಲಿ ಕಾಡಹಾದಿ; ನಡೆದುಬಿಡುತ್ತೇನೆ.
ಹೆಚ್ಚು ದೂರವಿಲ್ಲ; ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು.
ಒಂಟಿಪಯಣದಲ್ಲಿ ಶಬ್ದ ಸಂತೆಯಿಲ್ಲ;ಕಣ್ಣೀರಿಗೆ ಕಳವಳವಿಲ್ಲ.
ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ.

’ನಿನಗೆ ನೀನೆ ಗುರು’ ಕವಿವಾಣಿ ನಂಬಿದ್ದೇನೆ; ಅದೀಗ ನನ್ನದು..

                                  


4 comments:

Badarinath Palavalli said...

ದೇವಗಂಗೆಯೋ
ವೈತರಣಿಯೋ
ಅಲ್ಲೂ ಈಜಬೇಕಾದ್ದು ನಾವೇ...

ತೀವ್ರ ವಿಷಾದವೇ ಮೈಹೊತ್ತ ಕವನ. ಯಾಕೋ ವಿಹ್ವಲವಾಯಿತು ಮನಸ್ಸು. ಉತ್ಸಾಹ ತುಂಬ ಬೇಕಾದವರೇ ಹೀಗೆ ವಿಷಾದ ಬರೆದರೆ, ಇನ್ನು ಪುಡಿ ಜೀವಿಗಳಾದ ನಮ್ಮ ಗತಿ.

ಒಟ್ಟಾರೆಯಾಗಿ ಪ್ರತಿಮೆಯ ಅನಾವರನವನ್ನು ಸಾದೃಶ್ಯವಾಗಿ ಕಟ್ಟಿಕೊಡುವ ಕವನ.

sunaath said...

ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು. Wonderful!

ಆಸು ಹೆಗ್ಡೆ said...

ಉಷಾ,
ಓದು ಹಿಡಿಸಿತು.
ಭಾವಾಭಿವ್ಯಕ್ತಿ ಭಾವಸ್ಪಂದನ ಮೂಡಿಸಿತು.

ತಾವು ಅಂದುಕೊಂಡಂತೆ ಕವನ ಕಷ್ಟವಲ್ಲ
ಅಳುಕು ಬಿಡಿ.
ಮನಬಂದಂತೆ ಬರೆದು ಬಿಡಿ.

suragi \ ushakattemane said...

ಪೇಸ್ ಬುಕ್ ನಲ್ಲಿ ಬಂದ ಪ್ರತಿಕ್ರಿಯೆಗಳು;
Kisna Kp ಕತ್ತಲಲ್ಲಿ ಕಾಡಹಾದಿ; ನಡೆದುಬಿಡುತ್ತೇನೆ.
ಹೆಚ್ಚು ದೂರವಿಲ್ಲ; ಎದೆಯ ಇಬ್ಬನಿಗೆ ಮಿಣುಕುಹುಳದ ಕಾವಲು.
ಒಂಟಿಪಯಣದಲ್ಲಿ ಶಬ್ದ ಸಂತೆಯಿಲ್ಲ;ಕಣ್ಣೀರಿಗೆ ಕಳವಳವಿಲ್ಲ.
ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ; thumbaa istavaayitu


Tejaswini Hegde ಒಳಬೆಳಕಿಗೆ ಲೋಕ ಪರಿಧಿಗಳಿಲ್ಲ- tumba istavaaytu!
September 27 at 12:17pm ·

Poornima Girish ಕಳೆದುಕೊಂಡದ್ದಕ್ಕೆ ಋಣಭಾರದ ಸಂಕಟವಿಲ್ಲ... tumba ishta aithu usha mam...

ಅನುಪಮ ಗೌಡ unlimited likes mam
September 27 at 12:52pm

Raghavendra Joshi ಸುಮ್ಮನೆ ಕಣ್ಣುಮುಚ್ಚಿ ಹತ್ತು ಕ್ಷಣ ಅಸ್ವಾದಿಸಿದೆ.. ತುಂಬ ಚೆನ್ನಾಗಿದೆ ಕವಿತೆ.
September 27 at 12:55pm ·

Anuradha P Samaga super !
September 27 at 12:55pm ·

Sowmya Kalyankar Cant tell what i felt....manada bhavagalanneshtu chennaagi padagalalli haradiddera Usha avre! Hatsoff
September 27 at 1:02pm

Sandhya Rani ಉಷಾ ಕವನ ಓದಿ ಮನಸ್ಸಿನ ತುಂಬೆಲ್ಲಾ ಮೌನ...
September 27 at 2:20pm