
’ನಮ್ಮ ಮನೆಗೆ ರಾಜಕಾರಣಿಗಳು ಬರುವ ಅಗತ್ಯ ಇಲ್ಲ. ನಿಮ್ಮ ಸಾಂತ್ವನ ನಮಗೆ ಬೇಕಿಲ್ಲ. ಹಾಗೇನಾದ್ರು ಬಂದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’
ಹೀಗೆಂದು ಗುಡುಗಿದವರು ಉನ್ನಿಕೃಷ್ಣನ್. ಉನ್ನಿಕೃಷ್ಣನ್, ಮೊನ್ನೆ ಮುಂಬಯಿಯಲ್ಲಿ ನಡೆದ ಉಗ್ರಗಾಮಿ ವಿರುದ್ಧದ ಹೋರಾಟದಲ್ಲಿ ವೀರ ಮರಣವನಪ್ಪಿದ ಎನ್.ಎಸ್.ಜಿ ಪಡೆಯ ಮೇಜರ್ ಸಂದಿಪ್ ತಂದೆ.
ಕೇರಳದ ಮುಖ್ಯಮಂತ್ರಿ ಅಚ್ಯುತಾನಂದ ಮತ್ತು ಗೃಹ ಸಚಿವರಾದ ಕೋಡಿಹಾಳ್ ಬಾಲಕೃಷ್ಣ ಅವರು ನಿನ್ನೆ ಅಂದರೆ ಭಾನುವಾರದಂದು ಉನ್ನಿಕೃಷ್ಣ ಮನೆಗೆ ಬಂದಿದ್ದರು. ಇದು ಅವರಿಗೆ ಇಷ್ಟವಿರಲಿಲ್ಲ.
ಸಂದೀಪ್ ಉಗ್ರರೊಡನೆ ಸೆಣಸಾಡುತ್ತಾ ಹುತಾತ್ಮರಾದರು ಎಂದು ಗೊತ್ತಾದೊಡನೆ ಮಾದ್ಯಮದವರು ಸಹಜವಾಗಿಯೇ ಬೆಂಗಳೂರ್ಇನ ಇಸ್ರೋಲೇಔಟ್ ನಲ್ಲಿರುವ ಅವರ ನಿವಾಸಕ್ಕೆ ತೆರಳಿ ತಂದೆ ಉನ್ನಿಕೃಷ್ಣ ನಾಯರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದಾರೆ. ಅವರ ಮುಂದೆ ಮೈಕ್ ಹಿಡಿದಿದ್ದಾರೆ. ಅಂಥ ನೋವಿನ ಸಂದರ್ಭದಲ್ಲೂ ಆ ತಂದೆ ಹೇಳಿದ್ದೇನು ಗೊತ್ತೆ? ” ನನ್ನ ಮಗ ದೇಶಕ್ಕೆ ತನ್ನ ಕೈಲಾದ ಸೇವೆಯನ್ನಷ್ಟೇ ಮಾಡಿದ. ಆ ಬಗ್ಗೆ ನನಗೆ ಹಿಮ್ಮೆಯಿದೆ, ಇದನ್ನು ಮಾರ್ಕೆಟೈಸ್ ಮಾಡುವುದು ನನಗಿಷ್ಟವಿಲ್ಲ”. ಎಂದು ಅಚ್ಚಕನ್ನಡದಲ್ಲಿ ಹೇಳಿದರು, ವೀರಯೋದನ ಸ್ವಾಭಿಮಾನಿ ತಂದೆ.
ಕೇರಳದ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಯಾಕೆ ಸಾಂತ್ವನ ಹೇಳಬೇಕಾಗಿತ್ತು?
ಉನ್ನಿಕೃಷ್ಣನ್ ಕೇರಳದ ಕಲ್ಲಿಕೋಟೆ ಮೂಲದವರು. ಬೆಂಗಳೂರಿನ ಇಸ್ರೋದಲ್ಲಿ ಉದ್ಯೋಗಿಯಾಗಿದ್ದವರು. ಸಂದಿಪ್ ಮರಣ ಸಂಭವಿಸಿದಾಗ ಅವರ ಕುಟುಂಬಕ್ಕೆ ಕೇರಳ ಮುಖ್ಯಮಂತ್ರಿ ಸಾಂತ್ವನ ಹೇಳಲಿಲ್ಲ ಎಂಬ ಆಕ್ಷೇಪ ಕೇರಳದಲ್ಲಿ ವ್ಯಕ್ತವಾಗಿತ್ತು. ಅದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಚ್ಯುತಾನಂದನ್ ಉನ್ನಿಕೃಷ್ಣನ್ ಕುಟುಂಬಕ್ಕೆ ಸಂತಾಪಸೂಚಕ ಸಂದೇಶವೊಂದನ್ನು ಕಳುಹಿಸಿದ್ದರು. ಆ ಸಂದೇಶದಲ್ಲಿ ಸಂದಿಪನ ಹೆಸರು ತಪ್ಪಾಗಿ ಮುದ್ರಿತವಾಗಿತ್ತು.
ರಾಜಕಾರಣಿಗಳಿಗೆ ಎಲ್ಲವೂ ಯಾಂತ್ರಿಕ ಮತ್ತು ರಾಜಕೀಯ ಪ್ರೇರಿತ
ಮೊನ್ನೆಯ ಮುಂಬೈ ದುರ್ಘಟನೆಗೆ ಮಹಾರಾಸ್ಟ್ರದ ಗೃಹಸಚಿವರಾದ ಅರ್ ಅರ್ ಪಾಟೀಲ್ ನೀಡಿದ ಹೇಳಿಕೆಯನ್ನೇ ನೋಡಿ; ’ಮಹಾನಗರದಲ್ಲಿ ಇಂಥ ಸಣ್ಣ ಪುಟ್ಟ ಘಟನೆಗಳು ನಡೆಯುವುದು ಸಾಮಾನ್ಯ’ ಇಂದು ಈ ಸಾಮಾನ್ಯ ಘಟನೆ ಅವರ ಉಪಮುಖ್ಯ ಮಂತ್ರಿ ಮತ್ತು ಗೃಹಮಂತ್ರಿ ಗಾದಿಗಳನ್ನು ಕಿತ್ತುಕೊಂಡಿದೆ.
ಇನ್ನೊಬ್ಬರಿದ್ದಾರೆ ಗುಜರಾತಿನ ಮುಖ್ಯಮಂತ್ರಿ, ನರೇಂದ್ರ ಮೋದಿ. ಕಮಾಂಡೋಗಳುಗಳು ಉಗ್ರಗಾಮಿಗಳ ವಿರುದ್ದ ಸೆಣಸಾಟ ನಡೆಸುತ್ತಿರುವ ಸ್ಥಳಕ್ಕೆ ಬಂದ ಮೊದಲ ರಾಜಕಾರಣಿ. ಇದೇನೋ ಮೆಚ್ಚತಕ್ಕ ಅಂಶ. ಬಂದವರು ನಮ್ಮ ವೀರ ಯೋದರಿಗೆ ಸ್ಫೂರ್ತಿಯ ಎರಡು ಮಾತಾಡಿ ನೈತಿಕ ಬೆಂಬಲವಿತ್ತು ತೆರಳಬಹುದಾಗಿತ್ತು ಅಲ್ಲೂರಾಜಕೀಯ ತುರುಕಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ಘಟನಾ ಸ್ಥಳಕ್ಕೆ ಭೇಟಿ ನೀಡದ್ದಕ್ಕೆ ಆಕ್ಷೇಪಿಸಿದರು. ಮತ್ತೂ ಮುಂದುವರಿದು ಕರ್ಕೆರ ಕುಟುಂಬಕ್ಕೆ ೧ ಕೋಟಿ ರೂಪಾಯಿ ಪರಿಹಾರವನ್ನು ಘೋಶಿಸಿಬಿಟ್ಟರು ಆ ದಾನಶೂರ ಕರ್ಣ!. ನಾಚಿಕೆಯಾಗಬೇಕು ರಾಜಕಾರಣಿಗಳಿಗೆ. ಬಸಿದ ಬಿಸಿ ನೆತ್ತರು ಆರುವ ಮೋದಲೇ ಅದಕ್ಕೆ ಬೆಲೆ ಕಟ್ಟುವ ಅಮಾನವಿಯತೆಗೆ ನಮ್ಮದೊಂದು ಧಿಕ್ಕಾರ.
ಒಂದು ಕೋಟಿ ರೂಪಾಯಿ ಸರಕಾರಿ ನೌಕರನೊಬ್ಬನ ಕುಟುಂಬಕ್ಕೆ ಬಹು ದೊಡ್ಡ ಮೊತ್ತ. ಅದರೂ ಅದನ್ನು ಕರ್ಕೆರ ಪತ್ನಿ ತಿರಸ್ಕರಿಸಿದರು. ಈದೇಶದಲ್ಲಿ ಇನ್ನೂ ದೇಶ ಪ್ರೇಮ, ಸ್ವಾಬಿಮಾನ ಎಂಬುದು ಇಂತವರಿಂದಲೇ ಉಳಿದಿದೆ.
ಇನ್ನು, ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ನಿಜವಾದ ಅರ್ಥದಲ್ಲಿ ವಿಲಾಸಿಯೇ!. ಬುದವಾರ ರಾತ್ರಿಯಿಂದಲೇ ಉಗ್ರಗಾಮಿಗಳು ತಮ್ಮ ಪೈಶಾಚಿಕ ಕೃತ್ಯ ತೋರಿಸುತ್ತಿದ್ದಾರೆ. ಮನೆಯಲ್ಲಿ ಬೆಚ್ಚಗೆ ಕುಳಿತಿದ್ದ ದೇಶ್ ಮುಖ್, ಎಲ್ಲವೂ ಮುಗಿದ ಮೇಲೆ ಭಾನುವಾರದಂದು ತಮ್ಮ ಪಡೆಯೊಂದಿಗೆ ತಾಜ್ ಹೋಟೇಲ್ ಗೆ ಆಗಮಿಸಿದ್ದಾರೆ. ”ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ”
ದೇಶ್ ಮುಖ್ ಪಡೆಯಲಿದ್ದ ಪ್ರಮುಖರು ಯಾರು ಗೊತ್ತೆ? ಅವರ ಪುತ್ರನಾಗಿರುವ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮ. ಅಂದರೆ ದೇಶ್ ಮುಖ್ ತಲೆಯಲ್ಲಿ ಸುಳಿಯುತ್ತಿದ್ದುದೇನು?. ಮುಂಬೈ ಘಟನೆ ಸಿನಿಮಾಕ್ಕೊಂದು ಪ್ಲಾಟ್. ಎಲ್ಲಿಗೆ ಬಂದು ನಿಂತಿದ್ದಾರೆ, ನಮ್ಮ ರಾಜಕಾರಣಿಗಳು. ಧಿಕ್ಕಾರವಿರಲಿ ಅವರ ಬಾಳಿಗೆ.
ಕೇಂದ್ರ ಗೃಹಮಂತ್ರಿ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಗೃಹಮಂತ್ರಿ ಅರ್.ಅರ್. ಪಾಟೀಲ್ ತಲೆ ದಂಡ ಆಗಿ ಹೋಗಿದೆ. ಕೆಲವೇ ಘಂಟೆಗಳಲ್ಲಿ ದೇಶ್ ಮುಖ್ ಗಾದಿಯೂ ಉರುಳಲಿದೆ. ಅಂತೂ ಕಾಂಗ್ರೇಸ್ ಎಚ್ಚೆತ್ತುಕೊಳ್ಳುತ್ತಲಿದೆ.
ಇವತ್ತು ಕರ್ನಾಟಕದ ಕಾಂಗ್ರೇಸಿನ ಕಾರ್ಯಕಾರಿ ಸಮಿತಿಯ ಸಭೆ ನಡೆದಿತ್ತು. ಅದರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ ತಂಡದ ಮುಖ್ಯಸ್ಥ ಅಪ್ಝಲ್ ಗುರುವಿನ ಗಲ್ಲು ಶಿಕ್ಷೆಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಲಾಗಿದೆ. ಇದು ನಿಜಕ್ಕೂ ಬದಲಾವಣೆಯ ಮುನ್ಸೂಚನೆಯಾಗಿದ್ದರೆ ಚೆನ್ನ. ಆದರೆ ಇದರಲ್ಲೂ ರಾಜಕೀಯ ದುರುದ್ದೇಶಗಳಿದ್ದರೆ..? ಯಾಕೆಂದರೆ ಸಧ್ಯದಲ್ಲೆ ಉಪಚುನಾವಣೆಯಿದೆ ಅದರ ಹಿಂದೆಯೇ ಲೋಕಸಭಾ ಚುನಾವಣೆ ಬರುತ್ತಲಿದೆ.
ಅಂತೂ ಅಫ್ಝಲ್ ಗುರುವನ್ನು ಗಲ್ಲಿಗೇರಿಸುವುದು ಈಗ ಕಾಂಗೇಸ್ಸಿಗೂ ಬೇಕು. ಅದು ಜನರ ಆಕ್ರೋಶವನ್ನು ಬೇರೆಡೆಗೆ ತಿರುಗಿಸಲು ಏನೆಲ್ಲಾ ಕಸರತ್ತು ಮಾಡಬೇಕಾಗಿದೆ. ಬಿಜೆಪಿಗೂ ಮುಸ್ಲಿಂ ಭಯೋತ್ಪಾದಕರಿಗೊಂದು ಛಡಿಯೇಟು ನೀಡಬೇಕಾಗಿದೆ.
ರಾಜಕೀಯ ಪಕ್ಷಗಳು ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಲೇಬೇಕಾದ ಕಾಲಘಟ್ಟವಿದು.
ಬೇಕಾದರೆ ಕೋಮುಸೌಹಾರ್ದ ವೇದಿಕೆಯ ಮುಖಂಡರು ತಮ್ಮ ’ಬ್ರದರ್’ನ್ನು ರಕ್ಷಿಸಿಕೊಳ್ಳಲಿ.
ಇನ್ನೊಂದು ಮಾತನ್ನು ಹೇಳಲೇಬೇಕು; ಪೇಜಾವರ ಮಠಾದೀಶರಂತ ಸ್ವಾಮೀಜಿಗಳು ತಮ್ಮ ಮಿತಿಯಲ್ಲಿ ಕೆಲವೊಂದು ಸಮಾಜ ಪರಿವರ್ತನೆಯ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾದೆ. ಅದನ್ಯಾಕೆ ಮುಸ್ಲಿಂ ಧರ್ಮ ಗುರುಗಳು ಮಾಡಬಾರದು? ದೆಹಲಿಯ ಜಾಮ ಮಸೀದಿಯಲ್ಲಿ ಇಂಥ ದಿನ ಚಂದ್ರ ದರ್ಶನವೆಂದರೆ ಅದನ್ನು ಭಾರತದ ಸಮಸ್ತ ಮುಸ್ಲಿಮರೂ ಅನುಸರಿಸುತ್ತಾರೆ. ಧಾರ್ಮಿಕ ಮುಖಂಡರು ಹೊರಡಿಸುವ ’ಪತ್ವಾ’ ವನ್ನು ಎಲ್ಲರೂ ಅನುಕರಿಸುತ್ತಾರೆ. ಭಯೋತ್ಪಾದನೆಯಂತ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೋಡಿರುವ ಯುವಕರನ್ನು ಇವರೇಕೆ ನಿರ್ಭಂದಿಸಬಾರದು?
ಇಸ್ರೇಲಿನಂತ ಪುಟ್ಟ ಸ್ವಾಭಿಮಾನಿ ರಾಷ್ಟ್ರ ನಮ್ಮ ಬದ್ರತಾ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಜಗತ್ತಿನೆದುರು ಇಷ್ಟು ದೊಡ್ಡ ರಾಷ್ಟ್ರ ಬೆತ್ತಲಾಗಿ ನಿಲ್ಲಬೇಕೆ..?
8 comments:
ಉನ್ನಿಕೃಷ್ಣನ್ ಅವರು ಈ ತರ ಮಾಡಿದ್ದು ಶ್ಲಾಘನೀಯ. ಈ ರಾಜಕಾರಣಿಗಳನ್ನು ಹೋಲ್ ಸೇಲ್ ಆಗಿ ಕಲ್ಲು ಹೊಡೆದು ಸಾಯಿಸಬೇಕು.
ಸತ್ಯತೆ ಏನೆಂದರೆ ಇಷ್ಟೊಂದು ದೊಡ್ಡ ರೀತಿಯ ಪ್ರಮಾದ ನಡೆಯಲು ಕಾರಣ ಇಂತಹ ರಾಜಕಾರಣಿಗಳು ಹಾಗು ಇಂತಹವರನ್ನು ಆರಿಸಿ ಕಳುಹಿಸಿದ(ಮುಂದೂ ಕಳುಹಿಸುವ) ಜನರು! ಎಂದಿಗೆ ಬುಧ್ಧಿಬರುವುದೋ ಇವರೆಲ್ಲರಿಗೂ...??!! ಪ್ರಮಾದ ಒಂದೆರಡು ಸಲ ಆದರೆ ಸಹನೀಯ.. ಪ್ರಮಾದಗಳ ಸರಮಾಲೆಯೇ ಆಗುತ್ತಿದ್ದರೂ ಕೇವಲ ಪರಿಶೀಲಿಸುವ ಕೆಲಸವಾಗುತ್ತಿರುವು ನಿಜಕ್ಕೂ ಶೋಚನೀಯ :( ವ್ಯವಸ್ಥೆಯೊಳಗಣ ವ್ಯವಸ್ಥಿತ ಈ ಅವ್ಯವಸ್ಥೆತೆಗೆ ಧಿಕ್ಕಾರ!!
"ಸಂದೀಪನ ಮನೆಯಲ್ಲದಿದ್ದರೆ ಆಕಡೆ ಯಾವ ನಾಯಿಯೂ ಮೂಸಿ ನೋಡುತ್ತಿರಲಿಲ್ಲ" ಕೇರಳದ ಮುಖ್ಯಮಂತ್ರಿ ಸಂದೀಪನ ಅಪ್ಪನನ್ನು ಮಾದಲಿಸಿದ್ದು ಹೀಗೆ. ರಾಜಕಾರಣಿಗಳು ಸುಧಾರಿಸುತ್ತಾರೆ ಎಂದರೆ ನಾವೇ ಹುಚ್ಚರಾಗುತ್ತೇವೆ.
ಒಲವಿನಿಂದ
ಬಾನಾಡಿ
ಭಾಜಪದ ಏಕಾಂಗಿ ಮುಸ್ಲಿಂ ವೀರ ನಖವಿಯ ಲಿಪ್ಸ್ಟಿಕ್ ಹೇಳಿಕೆಯನ್ನು ಕೂಡ ನಿಮ್ಮ ಲೇಖನಕ್ಕೆ ಬಾಲಂಗೋಚಿಯಾಗಿ ಕೂಡಿಸಿ.
ಒಬ್ಬೊಬ್ಬರಾಗಿ ಎಲ್ಲ ರಾಜಕಾರಣಿಗಳೂ ಬೆತ್ತಲಾಗುತ್ತಿದ್ದಾರೆ.
ಇಂತಹ ಕುರೂಪಿಗಳು ಬೆತ್ತಲಾದರೂ ಅಸಹ್ಯವೇ!
ಹೌದು ನಿಮ್ಮ ಮಾತು ಅಕ್ಷರ ಸಹ ಸತ್ಯ ಅವರೆಲ್ಲ ಅಸ್ಪ್ರುಶ್ಯರು! ಕರಾಳ ರಾಜಕೀಯ ಛಾಯೆ ಮೂಡಿಸಲೆತ್ನಿಸಿ, ದೇಶಕ್ಕಾಗಿ ಪ್ರಾಣ ತೆತ್ತ ಕುಟುಂಬದ ಭೇಟೆಯ ನೆಪ ಹಾಗೂ ಆದು ಅನುಭವವನ್ನ ಕೆಟ್ಟದಾಗಿ ವಣಿ೯ಸುತ್ತಿರುವ ಈ (ನಾಯಿ)ಮಹಾನುಭಾವನಿಗೆ ಅದೆಂತ ದೇಶಾಭಿಮಾನವೋ....! ಸಾಂತ್ವಾನದ ನೆಪದಲ್ಲಿ ರಾಜಕೀಯವನ್ನ ಪ್ರಯತ್ನವನ್ನ ಪ್ರತಿರೋಧಿಸಿದ್ದಕ್ಕೆ ಉನ್ನಿ ಕೃಷ್ಣನ್ ತಪ್ಪೇಲ್ಲಿಂದ ಬಂತು? ಅಂದು ಕೊಟ್ಟ ಹೇಂಡ-ಹಣಕ್ಕೆ ನಮ್ಮ ಜನ ಕೊಟ್ಟ ಓಟಿಗೆ ಇಂದು ಈ ತರದ ಮಾತುಗಳನ್ನ ಕೇಳಬೇಕಾಗಿದೆ! ಹೆಯ್ ಮತ ಭಾಂದವ, ನಿನ್ನ ಸ್ವಂತ ಬದುಕಿಗೆ ಸಂಗಾತಿಯ ಹುಡುಕಾಟದಲ್ಲಿ ನೀ ತೋರುವ ಕಾಳಜಿಯನ್ನ ಹಿಂತ ಜನ ಪ್ರತಿನಿಧಿಯನ್ನ ಆರಿಸುವಾಗಲೂ ದಯವಿಟ್ಟು ತೋರು. ಹಿಂತಹ ಅಟ್ಟಹಾಸದ ಜನರನ್ನ ದಿಟ್ಟವಾಗಿ ಸದೆ-ಬಡೆಯುವ ಸಾಮರ್ಥ್ಯವನ್ನ ಸಾಭೀತು ಪಡಿಸು. ನಿನ್ನಾಳುವ ಜನ ಒಳ್ಳೆಯವರಾಗಿದ್ದರೆ ಒಳಿತಲ್ಲವೇ? ಸಂದೀಪನ ಆತ್ಮ ಚಿರ ಶಾಂತಿಯಿಂದರಲಿ.
ತುಂಬಾ ಮೌಲಿಕವಾದ ಬರಹ ಸುರಗಿಯವರೇ,
everyone loves good draught ಎಂಬ ಮಾತಿದೆ. ಇದು ಎಲ್ಲಾ ರೀತಿಯ ದುರಂತಗಳಿಗೂ ಅನ್ವಯಿಸುತ್ತದೆ ಎಂಬುದನ್ನು ಮುಂಬೈ ಘಟನೆ ಎತ್ತಿ ತೋರಿಸಿದೆ.
ಕಳಪೆ ಗುಂಡುನಿರೋಧಕ ಜಾಕೆಟ್ಗಳಿಂದಾಗಿ ಕರ್ಕೆರಾ ಸಹಿತ ಹಲವಾರು ಪೊಲೀಸ್ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಜೀವ ಕಳೆದುಕೊಂಡರು ಎಂಬ ವಿಷಯ ಈಗ ಬಹಿರಂಗಗೊಂಡಿದೆ. ಭದ್ರತೆ ಹಾಗೂ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವವರಿಗೆ ಯಾವ ಶಿಕ್ಷೆಯೂ ಇಲ್ಲ. ಹಾಗಿದ್ದ ಮೇಲೆ ದೇಶಪ್ರೇಮ ಎಂಬ ಸೊಗಡು ಮಾತೇಕೆ?
ನಮ್ಮ ಜನರೂ ಹಾಗೇ ಇದ್ದಾರೆ ಬಿಡಿ. ಸತ್ತ ಕೂಡಲೇ ಹೊತ್ತು ಮೆರೆಸುತ್ತಾರೆ. ಕೆಳಗಿಳಿಸಿದ ತಕ್ಷಣ ಎಲ್ಲಾ ಮರೆಯುತ್ತಾರೆ. ಜನರಿಗೆ ತಕ್ಕಂತಿದ್ದಾರೆ ಜನಪ್ರತಿನಿಧಿಗಳು.
ಯಾರಿಗೆ ವಿವೇಕ ಹೇಳೋದು?
- ಚಾಮರಾಜ ಸವಡಿ
ನಾನೂ ಪೇಪರ್ ಲ್ಲಿ ಕೇರಳದ ಮುಕ್ಯಮಂತ್ರಿ ತೋರಿಕೆಗೋಸ್ಕರ ಇಲ್ಲಿಗೆ ಬಮದು ಮುಖಭಂಗ ಅನುಭವಿಸಿದ್ದನ್ನು ಓದಿದ್ದೇನೆ ; ಸತ್ತ ಮನೆಯಲ್ಲೂ ರಾಜಕೀಯ ಮಾಡುವವರವರು, ನಾಚಿಕೆಗೆಟ್ಟವರು . . ಸಂದೀಪನ ತಂದೆ ಮಾಡಿದ್ದು ಸರಿಯಾಗಿಯೇ ಇದೆ ಬಿಡಿ.
Post a Comment