ನನ್ನ ಬ್ಲಾಗ್ ಬರಹಕ್ಕೆ ಪ್ರತಿಕ್ರಿಯಿಸುತ್ತ ರಾಮರವರು ’ಬಜರಂಗಿಗಳ ಪುಂಡಾಟದ ಬಗ್ಗೆ ಬರೆಯಿರಿ’ ಎಂದಿದ್ದರು. ಆ ಪುಂಡುಪೋಕರಿಗಳ ಪಡೆಯನ್ನು ನಿಯಂತ್ರಿಸಬೇಕಾದ ಸರಕಾರವೇ ತೆರೆಮರೆಯಲ್ಲಿ ಅದನ್ನು ಮುನ್ನಡೆಸುತ್ತಿರುವಾಗ ನಾವೇನು ಮಾಡಲು ಸಾಧ್ಯ? ಎಂದು ಅಸಹಾಯಕತೆಯಿಂದ ಮನಸ್ಸು ಕಂದು ಹೊಗಿತ್ತು. ಆದರೆ ಇಂದು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಾಪಸಿಂಹ ಎಂಬ ಪತ್ರಕರ್ತರು ಬರೆದ ಅಂಕಣ ಬರಹವನ್ನು ಒದಿದಾಗ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.
ಅವರ ಉವಾಚ ಇದು; ’ಅದು ಬಜರಂಗದಳವಿರಬಹುದು ಅಥವಾ ಇನ್ನಾವುದೇ ಸಂಘಟನೆ ಇರಬಹುದು. ಧರ್ಮದ ಅವಹೇಳನ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ.....’
’ಅವರು ಹಂಚುವ ಅವಹೇಳನಕಾರಿ ಪುಸ್ತಕಗಳನ್ನು ಮೊದಲು ಪಡೆದುಕೊಂಡು, ಅನಂತರ ಮೈಗೆ ಬಿಸಿ ಮುಟ್ಟಿಸಿ. ಆಧಾರ ಸಮೇತ ಪೋಲಿಸರಿಗೊಪ್ಪಿಸಿ.’
ಹೀಗೆ ಅಪ್ಪಣೆ ಕೊಡಿಸುವ ಪತ್ರಕರ್ತನ ಮನಸ್ಥಿತಿಯನ್ನು ಬಿಡಿಸಿ ಹೇಳುವ ಅವಸ್ಯಕತೆಯಿಲ್ಲ.
ಕ್ರಿಯೆಗೊಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ. ಆದರೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸುವುದಕ್ಕೂ, ಸಂಘಟನೆಯೊಂದು ಪ್ರತಿಕ್ರಿಯಿಸುವುದಕ್ಕೂ, ಸರಕಾರವೊಂದು ಪ್ರತಿಕ್ರಿಯಿಸುವುದಕ್ಕೂ ವ್ಯತ್ಯಾಸವಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಚರ್ಚ್ ಗಳ ಮೇಲೆ ನಡೆದ ಸೀರಿಯಲ್ ದಾಳಿಗಳ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ವರ್ತಿಸಲಿಲ್ಲ. ಬಿಜೆಪಿ ಪಕ್ಷದ ವಕ್ತಾರರಂತೆ ವರ್ತಿಸಿದ್ದರು.
ಕುಮಾರಸ್ವಾಮಿಯಿಂದ ’ನಪುಂಸಕ’ ಎಂದು ಕರೆಯಿಸಿಕೊಂಡು, ಕೇಂದ್ರದಿಂದ ಒತ್ತಡ ಬಂದ ಮೇಲೆ ಈಗ ಕರ್ನಾಟಕದ ಮುಖ್ಯಮಂತ್ರಿಯಾಗಲು ಮನಸ್ಸು ಮಾಡಿದಂತಿದೆ. ಚರ್ಚ ಮೇಲೆ ದಾಳಿ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಬಂದನಕ್ಕೆ ವಾರಂಟ್ ಹೊರಡಿಸಲಾಗಿದೆ. ಚರ್ಚ್ ಗಳಿಗೆ ಬಿಗಿ ಬಂದೋಬಸ್ತು ನಿಡುವಂತೆ ಆದೇಶಿಸಲಾಗಿದೆ.
ಇವತ್ತು ಬೆಳಗಾವಿಯಲಿದ್ದ ಮುಖ್ಯಮಂತ್ರಿಗಳ ಮುಖ ಸುಟ್ಟ ಬದನೆಕಾಯಿಯಂತಿತ್ತು. ಸಿಡ ಸಿಡ ಎನ್ನುತ್ತಿದ್ದರು. ’ಬಿಜೆಪಿ ಶರವೇಗದಲ್ಲಿ ಬೆಳೆಯುತ್ತಿದೆ. ಅದನ್ನು ಸಹಿಸದ ಕಾಂಗ್ರೇಸ್ ಅಪಪ್ರಚಾರ ಮಾಡುತ್ತಿದೆ....ಕುಮಾರಸ್ವಾಮಿ ಸಂಯಮ ಕಳೆದುಕೊಂಡಿದ್ದಾರೆ...’ಎಂದೆಲ್ಲಾ ಹತಾಶರಾಗಿ ನುಡಿದರು.
ಅದು ನಿಜವಿದ್ದರೂ ಇರಬಹುದು. ಅದರೆ ಒಬ್ಬ ರಾಜಕೀಯ ಮುತ್ಸುದ್ಧಿಗೆ ಇತಿಹಾಸದ ಅರಿವಿರಬೇಕು. ಮುಖ್ಯಮಂತ್ರಿ ವಿರೇಂದ್ರಪಾಟೀಲರನ್ನು ಕೆಳಗಿಳಿಸಲು ಅವರದೇ ಪಕ್ಷದ ಜಾಫರ್ ಷರೀಫ್ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಕೊಮುಗಲಭೆಯನ್ನು ಹುಟ್ಟುಹಾಕಿದ್ದು ಈಗ ಇತಿಹಾಸ. ಹಾಗಾಗಿ ಎರಡು ಅಲಗಿನ ಮೇಲಿನ ನಡಿಗೆಯಂತಿರಬೇಕು ಅಧಿಕಾರದ ಗದ್ದುಗೆ.
ಗೃಹಮಂತ್ರಿ ವಿಎಸ್ ಆಚಾರ್ಯರಂತೂ ನಿಜವಾದ ಅರ್ಥದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ನಿಷ್ಣಾತರು!
ಗೇಳೆಯರೇ, ನಾನು ನನ್ನ ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೊರಟಿದ್ದೇನೆ. ಹಾಗಾಗಿ ಉಳಿದ ವಿಚಾರಗಳನ್ನು ಊರಿಂದ ಬಂದ ನಂತರ ಮಾತಡೋಣಾ ಆಗದೇ?
How to Check Your Mahiti Kanaja Pension Status – Step-by-Step Guide (2025)
-
Hello and welcome, dear reader Mahiti Kanaja Pension Status If you’re
looking to check your Mahiti Kanaja Pension Status online, you’ve come to
the right p...
2 days ago
7 comments:
ಏನೋ ಎಲ್ಲ ಬದಲಾದಂತಿದೆ. ನಿಮ್ಮ ಬ್ಲಾಗ್ ನೋಡಿದ ಕೂಡಲೇ ಅಂದುಕೊಂಡಿದ್ದವರ ಮನೆ ಬಿಟ್ಟು ಬೇರೊಬ್ಬರ ಮನೆ ಹೊಕ್ಕ ಕಕ್ಕಾವಿಕ್ಕಿತನ.
ಪ್ರತಾಪಸಿಂಹರ ಬರವಣಿಗೆಯನ್ನು ಖಂಡಿತ ಯಾರೂ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ. ಆದರೆ, ಅದು ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದೆ ಎಂಬ ಕಾರಣಕ್ಕೆ ಖಂಡನಾರ್ಹ. ಮತಾಂತರ ಎಷ್ಟು ತಪ್ಪೋ, ಅದನ್ನು ಹಿಂಸೆಯ ಮೂಲಕ ನಿಯಂತ್ರಿಸಲು ಹೊರಟಿರುವುದು ಅಷ್ಟೇ ತಪ್ಪು.
ನೀವು ಊರಿಗೆ ಹೋಗಿ. ಗೊಬ್ಬರ ತಂದು ಪ್ರತಾಪಸಿಂಹನ ತಲೆಯಲ್ಲಿ ಒಂದಿಷ್ಟು ಸುರಿಯಿರಿ.
- ಪಲ್ಲವಿ ಎಸ್.
ನನ್ನ ಮನವಿಗೆ ಸ್ಪಂದಿಸಿದಕ್ಕೆ ತುಂಬಾ ಧನ್ಯವಾದಗಳು. ಮತ್ತೆ ವಿವರವಾಗಿ ಮತ್ತೆ ಪ್ರತಿಕ್ರಿಯಿಸಿವೆ.
suragi, nimma baravanigegaLu tumbaa chennaagive.
khushiyaagive.
- hemashree
www.smilingcolours.blogspot.com
ಹೋ .. ಸಖತ್ ಆಗಿದೆ. ನೇರವಾಗಿದೆ.
ಪ್ರತಾಪ ಸಿಂಹ...ಅಯ್ಯೋ ಈಗೆಲ್ಲ ಬರದರೆ ದೊಡ್ಡ ಪೋತಪ್ಪ ಆಗಿಬಿಡ್ತೀನಿ ಅಂದುಕೊಂಡಿದ್ದಾನೆ ಮಹರಾಜ..........ಒಮ್ಮೆ ಗಾಂಧಿಜಿನ ಬೈಯ್ಯೋದು, ಇನ್ನೊಮ್ಮೆ ವಾಜಪೇಯಿನ .....ಏನೂ ಕಾಣದೆ ಎಲ್ಲಾ ಕಂಡವನಂತೆ ಯಾವಗ ಮೋದಿ ಬಗ್ಗೆ ಬರೆದನೋ ಅಂದೇ ಅಂದುಕೊಂಡೆ ಅದೊಂದು ಹೊಗಳು ಬಟ್ಟಿಕೆಯ ಕೂಸೆಂದು.
ಬೊಗೊಳೋ ನಾಯಿಗೆ ತಲೆ ಕೆಡಿಸಿಕೊಳ್ಳ ಬಾರೆದೆಂಬ ನಾಣ್ಣುಡಿ ನೆನಪಾಗುತ್ತೆ ಯಾಕೋ...
ನಿಮ್ಮ ಬರವಣಿಗೆ ಚನ್ನಾಗಿ ಮುಡಿದೆ. ತಿಳುವಳಿಕೆಯನ್ನು ಸೇರಿಸಿಕೊಂಡು..........
baraha chennagideri....
viveka illada yare adaru pratapa simha baraha odidare khandithavagiyoo hardcore hidnu aguvudaralli yavude anuman illa alwa.....
Post a Comment