Tuesday, December 25, 2012

...... ಪುರುಷತ್ವ ಹರಣದ ಶಿಕ್ಷೆಯೇ ಬೇಕು.



·         ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರವಾದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಅತ್ಯಂತ ಧಾರುಣವಾಗಿ ಸಾಮೂಹಿಕ ಅತ್ಯಚಾರ ನಡೆಯಿತು. ಆಕೆಯ ದೇಹದ ಮೇಲೆ ಮೃಗೀಯವಾಗಿ ವರ್ತಿಸಿದ ಪುರುಷಪುಂಗವರ ಆಟಾಟೋಪವನ್ನು ಮಾಧ್ಯಮಗಳಲ್ಲಿ ಓದಿದಾಗ, ನೋಡಿದಾಗ, ಕೇಳಿದಾಗ ನನಗೆ ತಕ್ಷಣಕ್ಕೆ ಅನ್ನಿಸಿದ್ದು ಅವರಿಗೆ ಅತ್ಯುಗ್ರವಾದ ಶಿಕ್ಷೆ ನೀಡಬೇಕೆಂದು. ಹಾಗಾಗಿ ನನ್ನ ಪೇಸ್ ಬುಕ್ ಅಕೌಂಟ್ ನಲ್ಲಿ ನಾನು ಹೀಗೆ ಬರೆದೆ;
·          
·         ”ದೆಹಲಿಯಲ್ಲಿ ವಿದ್ಯಾರ್ಥಿಯೊಬ್ಬಳನ್ನು ಚಲಿಸುತ್ತಿದ್ದ ಬಸ್ಸಿನಲ್ಲಿ ಧಾರುಣವಾಗಿ ಗ್ಯಾಂಗ್ ರೇಪ್ ಮಾಡಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ...
ಆದರೆ.. ಸಾಮೂಹಿಕ ಅತ್ಯಾಚಾರಿಗಳಿಗೆ ಕೊಡುವ ಅತ್ಯುಗ್ರ ಶಿಕ್ಷೆಯೆಂದರೆ ಅವರ ಪುರುಷತ್ವ ಹರಣವಾಗಬೇಕು. ಅವರ ಆಯುಧವನ್ನು ನಿಷ್ಕ್ರೀಯಗೊಳಿಸಬೇಕು; ಅವರು ಬದುಕಬೇಕು; ಬದುಕಿಯೂ ಸತ್ತಂತಿರಬೇಕು; ಪ್ರತಿ ಕ್ಷಣವೂ ಅವರ ಸಾವು ಜಗಜ್ಜಾಹೀರಾಗುತ್ತಲಿರಬೇಕು...
·          
·         ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಹಾಗೂ ಅಂತರ್ಜಾಲದಲ್ಲಿ ಈ ಘಟನೆಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಅನ್ನಿಸಿಕೆಗಳನ್ನು ಗಮನಿಸಿದಾಗ ನನಗನ್ನಿಸಿದ್ದು ಪುರುಷರ ಮತ್ತು ಮಹಿಳೆಯರ ಅಭಿವ್ಯಕ್ತಿಯಲ್ಲಿನ ಭಾಷಾ ಬಳಕೆಯ ವ್ಯತ್ಯಾಸ.

ಮಹಿಳೆಯೊಬ್ಬಳ ಮೇಲೆ ಲೈಂಗಿಕ ಅತ್ಯಚಾರ ನಡೆದಾಗ ಪುರುಷರಂತೆ ಯೋಚಿಸುವ ಮಹಿಳೆಯರನ್ನೂ ಒಳಗೊಂಡಂತೆ, ಇಡೀ ಪುರುಷ ಜಗತ್ತು ಅದನ್ನು ಬಣ್ಣಿಸುವುದು ’ಶೀಲ ಕಳೆದುಕೊಳ್ಳುವುದು’ ಆದರೆ ಸ್ತ್ರೀ ಮನಸ್ಸು ಗ್ರಹಿಸುವುದು ’ಬದುಕು ಕಳೆದುಕೊಳ್ಳುವುದು’ ಗಂಡಿನ ದೃಷ್ಟಿಯಲ್ಲಿ ಕಳೆದುಕೊಂಡದ್ದನ್ನು ಮತ್ತೆ ಪಡೆಯಲಾಗದು. ಆದರೆ ಹೆಣ್ಣಿನ ದೃಷ್ಟಿಯಲ್ಲಿ ಮತ್ತೆ ಬದುಕನ್ನು ಕಟ್ಟಿಕೊಳ್ಳಬಹುದು.

ಕಳೆದ ಭಾನುವಾರ ರಾತ್ರಿ ಕಾಮಾಂಧರ ಪೈಶಾಚಿಕ ಕ್ರೌಯಕ್ಕೆ ತುತ್ತಾಗಿ ಜೀವಚ್ಛವವಾಗಿ ಸಪ್ತರ್ ಜಂಗ್ ಆಸ್ಪತ್ರೆಯಲ್ಲಿ ಮಲಗಿರುವ ಆ ವಿದ್ಯಾರ್ಥಿನಿ ಮತ್ತೆ ಬದುಕಿನ ಬಗ್ಗೆ ಆಶಾವಾದಿಯಾಗಲು ಕಾರಣವೇ ಆಕೆಯಲ್ಲಿನ ”ಬದುಕನ್ನು ಕಟ್ಟಿಕೊಳ್ಳುವ’ ಛಲ. ಶನಿವಾರ ಆಸ್ಪತ್ರೆಯ ವೈದ್ಯಾಧಿಕಾರಿಗಳು ಆಕೆಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ವಿವರಿಸಿದ್ದರು. ಆಕೆಯ ಮಾನಸಿಕ ಸ್ಥಿಮಿತ ಮತ್ತು ಜೀವನ ಪ್ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದರು.  
ನಮಗೆ ಗೊತ್ತಿದೆ; ಅತ್ಯಾಚಾರ ಪ್ರಕರಣಗಳಲ್ಲಿ ಅದು ಬಲತ್ಕಾರದ ದೈಹಿಕ ಸಂಪರ್ಕವೋ ಅಥವಾ ಒಪ್ಪಿತ ಲೈಂಗಿಕ ಕ್ರಿಯೆಯೋ ಎಂದು ನಿರ್ಧರಿಸುವುದು ಕಷ್ಟ ಸಾಧ್ಯ. ಹಾಗಾಗಿ ಅದರ ವಿಚಾರಣೆಯ ಪ್ರಕ್ರಿಯೆ ದೀರ್ಘವಾಗಿರುತ್ತದೆ. ಆದರೆ ಸಾಮೂಹಿಕ ಅತ್ಯಾಚಾರದಲ್ಲಿ ಘಟನೆ ಸ್ಪಷ್ಟವಿರುತ್ತದೆ. ಅಲ್ಲಿ ನಿಸ್ಸಂದೇಹವಾಗಿ ಹೆಣ್ಣು ಬಲಿಪಶುವಾಗಿರುತ್ತಾಳೆ. ಅಲ್ಲೊಂದು ಮೃಗೀಯ ವರ್ತನೆ ನಡೆದಿರುತ್ತದೆ.

ಪುರುಷಪುಂಗವನೆಂದು ತನ್ನನ್ನು ತಾನು ಹೆಮ್ಮೆಯಿಂದ ಕರೆದುಕೊಳ್ಳುವ ಗಂಡಸಿನ ಆಯುಧವೇ ’ಅದು’. ಅದೇ ಇಲ್ಲದಿದ್ದರೆ ಅವನೊಂದು ಹುಳು.ಕಾಲಲ್ಲಿ ಹೊಸಕಿ ಹಾಕಬಹುದಾದ ಜಂತು.ಸೆಕ್ಸ್ ವಿಚಾರದಲ್ಲಿ ಆತನಿಗೆ ವಿವೇಚನೆಯಿಲ್ಲ. ಕಂಡಲ್ಲಿ ನುಗ್ಗುವ ಗೂಳಿ ಅವನು.ಹೆಣ್ಣು ಸಿಗದಿದ್ದರೆ ಅವನಿಗೆ ಇನ್ನೊಂದು ಗಂಡೂ ಆದೀತು..ಕೊನೆಗೆ ಪ್ರಾಣಿಯಾದರೂ ಓಕೆ.

ಒಂದು ವಾರದಿಂದ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ತೃಣಮಾತ್ರವೂ ಅರಿವಿಲ್ಲದಂತೆ ತ್ರಿಪುರದ ಬಿಸ್ಲಾಗಾರದಲ್ಲಿ  ಬುಧವಾರ ರಾತ್ರಿ ಮಹಿಳೆಯೊಬ್ಬಳನ್ನು ಮನೆಯಿಂದ ಹೊರಗೆಳೆದು ತಂದು ಸಾರ್ವಜನಿಕರೇ ಎದುರೇ ಸಾಮೂಹಿಕ ಅತ್ಯಚಾರ ನಡೆಸಿ,ಅನಂತರ ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಮತ್ತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇಂತಹ ಅನಾಗರಿಕ ವರ್ತನೆಗೆ ಸಾರ್ವಜನಿಕರೂ ಸಾಕ್ಷಿಯಾಗಿದ್ದಾರೆ ಎಂದರೆ ಆ ಮನಸ್ಥಿತಿ ಹೇಗೆ ರೂಪುಗೊಂಡಿರಬಹುದು?

ನಾನು ಮತ್ತೆ ಮತ್ತೆ ನಂಬುವುದು ’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ’ ಎಂಬುದನ್ನು. ನಾವು ನಮ್ಮ ಮಕ್ಕಳನ್ನು ಅವರ ಹದಿಹರೆಯದ ತನಕ ಯಾವ ಪರಿಸರದಲ್ಲಿ, ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಪೋಷಕರು ಸ್ವತಃ ಮಾದರಿಯಾಗಿರದಿದ್ದಲ್ಲಿ ಮಕ್ಕಳಲ್ಲಿ ಆರೋಗ್ಯವಂತ ಮನಸ್ಸು ರೂಪುಗೊಳ್ಳಲು ಸಾಧ್ಯವಿಲ್ಲ. ಮಕ್ಕಳು ಬಹುಬೇಗನೆ ಎಲ್ಲವನ್ನೂ ಗ್ರಹಿಸಿಕೊಳ್ಳುತ್ತಾರೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಸ್ವಾಭಿಮಾನದ ಜೊತೆಗೆ ಸ್ವರಕ್ಷಣೆಯ ಕಲೆಯನ್ನು ಸಂದರ್ಭಕ್ಕನುಗುಣವಾಗಿ ಹೇಳಿಕೊಡಬೇಕು. ಹಾಗೆಯೇ ಗಂಡು ಮಕ್ಕಳಿಗೂ ಸ್ತ್ರೀಯರನ್ನು ಗೌರವದಿಂದ ಕಾಣುವುದನ್ನು ಅವರಿಗೆ ಅರಿವಿಲ್ಲದಂತೆ ಮನಗಾಣಿಸುತ್ತಿರಬೇಕು. ಯಾಕೆಂದರೆ ಪುರುಷ ಪ್ರಧಾನ ಯೋಚನೆಯನ್ನು ಅಷ್ಟು ಸುಲಭದಲ್ಲಿ ಬದಲಾಯಿಸುವುದು ಸಾಧ್ಯವಿಲ್ಲ.

ನನಗೀಗಲೂ ನೆನಪಿದೆ. ನನ್ನ ಮಗನೊಮ್ಮೆ ಮಾತಿನ ಮಧ್ಯೆ ”ಹೆಂಗಸು’ ಎಂಬ ಪದವನ್ನು ಉಪಯೋಗಿಸಿದ. ನನಗೆ ಆ ಪದವನ್ನು ಕೇಳಿದರಾಗದು. ನಾನು ಎಂದೂ ಆ ಪದವನ್ನು ಉಪಯೋಗಿಸುವುದಿಲ್ಲ. ಹೆಂಗಸು ಅಂದರೆ ಹೆಣ್ಣು ಕೂಸು. ಹೆರುವವಳು ಎಂಬ ಅರ್ಥ ಅದರಿಂದ ಸ್ಫುರಿಸುತ್ತದೆಯೆಂಬುದು ನನ್ನ ಭಾವನೆ., ಮಹಿಳೆಯ ಅಸ್ತಿತ್ವವನ್ನು ಅದು ಸೀಮಿತಗೊಳಿಸುತ್ತದೆಯೆಂಬುದು ನನ್ನ ಗ್ರಹಿಕೆ. ನನ್ನನ್ನು ಯಾರಾದರೂ ’ಆಯಮ್ಮ’ ಎಂದು ಸಂಭೋದಿಸಿದರೆ ನನ್ನ ಸಿಟ್ಟು ನೆತ್ತಿಗೇರುತ್ತದೆ!  ನನ್ನ ಮಗನಿನ್ನೂ ತುಂಬಾ ಚಿಕ್ಕವನು, ಆದರೂ ನಾನವನಿಗೆ ಹೇಳಿದೆ ’ಹೆಂಗಸು ಅನ್ನಬಾರದು, ಮಹಿಳೆ ಅನ್ನು’ ಅಂತ ಆಮೇಲೆ ನಾನದನ್ನು ಮರೆತು ಬಿಟೆ. ಆದರೆ ಒಂದೆರಡು ವರ್ಷಗಳ ಹಿಂದೆ ನಾನೇ ಬಾಯಿತಪ್ಪಿ ’ಆ ಹೆಂಗಸು..’ ಅಂದುಬಿಟ್ಟೆ. ಆಗ ಅಲ್ಲೇ ಇದ್ದ ನನ್ನ ಮಗ ’ ಅಮ್ಮಾ ಗೌರವ..ಮಹಿಳೆ ಅನ್ನು’ ಅಂದುಬಿಟ್ಟ..ನಾನು ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ಟೆ!

ಶನಿವಾರ ಟೈಮ್ಸ್ ನೌ ಚಾನಲ್ಲಿನ ವರದಿಗಾರರೊಬ್ಬರು ತಮ್ಮ ಲೈವ್ ವರಧಿಯಲ್ಲಿ ಹೇಳುತ್ತಿದ್ದರು, ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಭಟನಕಾರರ ಸರಾಸರಿ ವಯಸ್ಸು ೨೨. ಅಂದರೆ ಅದು ಲೈಂಗಿಕ ಪರ್ವಕಾಲ. ಶರೀರದಲ್ಲಿ ಲೈಂಗಿಕ ಹಾರ್ಮೋನ್ ಗಳು ಅತ್ಯಧಿಕವಾಗಿ ಸ್ರವಿಸುವ ಕಾಲಘಟ್ಟ.ಆದರೂ ಮನುಷ್ಯನ ಮೂಲಭೂತ ಅವಶ್ಯಕತೆಯಲ್ಲಿ ಒಂದಾದ ಸೆಕ್ಸ್ ಅನ್ನು ನಿಯಂತ್ರಣ್ದಲ್ಲಿ ಇಟ್ಟುಕೊಳ್ಳಲು ಇವರಿಗೆಲ್ಲಾ ಹೇಗೆ ಸಾಧ್ಯವಾಯಿತು? ಅದು ಸಂಸ್ಕಾರದಿಂದ, ಶಿಕ್ಷಣದಿಂದ, ವೈಯಕ್ತಿಕ ಬದುಕಿನಲ್ಲಿ ನೈತಿಕ ಮೊಲ್ಯಗಳನ್ನು ಅಳವಡಿಕೊಂಡಿರುವುದರಿಂದ ಸಾಧ್ಯವಾಗಿದೆ. ಅಲ್ಲಿ ಅವರೆಲ್ಲಾ ಸೇರಿ ಸಮಾಜಮುಖಿ ಹೋರಾಟವೊಂದರಲ್ಲಿ ತೊಡಗಿಕೊಂಡಿರುವುದನ್ನು ನೋಡಿದಾಗ ಭವಿಷ್ಯದ ಬಗ್ಗೆ ಆಶಾವಾದ ಮೂಡುತ್ತದೆ. ಇಂತಹ ಮನಸ್ಸುಗಳು ರಾಜಕೀಯಕ್ಕೆ ಬರಬೇಕು; ಕಾನೂನು ರಚನೆಯಲ್ಲಿ ಭಾಗಿಯಾಗಬೇಕು.ಆರೋಗ್ಯವಂತ ಸಮಾಜವನ್ನು ಕಟ್ಟಬೇಕು. ಆದರೆ ಅದು ಸಾಧ್ಯವೇ?

ನಮ್ಮ ಕೆಲವು ಜನಪ್ರತಿನಿಧಿಗಳನ್ನು ನೋಡಿದರೆ ಕಾನೂನನ್ನು ರೂಪಿಸುವವರೇ ಕಾನೂನನ್ನು ಉಲ್ಲಂಘಿಸುವವರೂ ಆಗಿರುತ್ತಾರೆ ಎಂಬುದು ಗೊತ್ತಾಗುತ್ತದೆ. ಇದರ ಜೊತೆಗೆ ಕೆಲವರು ರೇಪ್ ಪ್ರಕರಣಗಳಲ್ಲಿ ಆರೋಪಿಗಳೂ ಆಗಿರುತ್ತಾರೆ. ವಯ್ಯಕ್ತಿಕ ಬದುಕಿನಲ್ಲಿ ಹಲವಾರು ಮಹಿಳೆಯರೊಡನೆ ಸಂಬಂಧವಿಟ್ಟುಕೊಂಡವರೂ ಆಗಿರುತ್ತಾರೆ. ಇದರ ಜೊತೆಗೆ ಮೀಡಿಯಾಗಳು, ಸಿನೇಮಾಗಳು,ಜಾಹೀರಾತುಗಳು ಹೆಣ್ಣನು ಭೋಗದ ವಸ್ತುಗಳಾಗಿ, ಮಾರುಕಟ್ಟೆಯ ಸರಕುಗಳಾಗಿ ಕಾಣುತ್ತವೆ. ಹೆಣ್ಣಿನ ಕೊಬ್ಬು ಇಳಿಸಬೇಕಾದರೆ ಆಕೆಯ ಮೇಲೆ ಅತ್ಯಚಾರ ಮಾಡಬೇಕೆಂಬುದು ಸಿನೇಮಾರಂಗ ಒಪ್ಪಿಕೊಂಡ ಮೌಲ್ಯಗಳಲ್ಲಿ ಒಂದು. ನನಗೆ ಈಗಲೂ ನೆನಪಿದೆ. ಬಹುಶಃ ಅದು ಸುನಿಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಸಿನೇಮಾವಿರಬೇಕು. ಒಂದು ಬ್ಯಾಂಕ್ ದರೋಡೆ ನಡೆಯುತ್ತದೆ. ಬ್ಯಾಂಕಿನೊಳಗಿದ್ದ ಸುಮನ್ ನಗರ್ ಕರ್ ಅದನ್ನು ಪ್ರತಿಭಟಿಸುತ್ತಾಳೆ.”ಅವಳ ಕೊಬ್ಬು ಇಳಿಸು’ ಎಂದು ಖಳ ನಾಯಕ ತನ್ನ ಸಹಚರನಿಗೆ ಹೇಳುತ್ತಾನೆ. ಆಗ ದಡಿಯನೊಬ್ಬ ಎಲ್ಲರ ಎದುರಿನಲ್ಲೇ ಅವಳ ಮೇಲೆ ಅತ್ಯಚಾರ ಎಸಗುತ್ತಾನೆ. ನನ್ನ ದೃಷ್ಟಿಯಲ್ಲಿ ಹೆಣ್ಣನ್ನು ಶೋಷಣೆ ಮಾಡುತ್ತಿರುವವರಲ್ಲಿ ಚಿತ್ರರಂಗ ಮತ್ತು ಮೀಡಿಯಾಗಳು ಮೊದಲ ಸಾಲಿನಲ್ಲಿ ಬರುತ್ತವೆ. ಹೆಣ್ಣನ್ನು ಸೂಕ್ಷ್ಮಸಂವೇದನೆಯಿಂದ ಕಾಣುವ ಮಾಧ್ಯಮವಿದ್ದರೆ ಅದು ರಂಗಭೂಮಿ ಮಾತ್ರ. ಅತ್ಯಾಚಾರಕ್ಕೆ ಒಳಗಾಗದ ಮಹಿಳೆಯೊಬ್ಬಳು ಆತನ ಮರ್ಮಾಂಗವನ್ನು ಕತ್ತರಿಸಿ ಸೇಡು ತೀರಿಕೊಳ್ಳವ ವಸ್ತುವುಳ್ಳ ’ಪುರುಷ’ ನಾಟ್ಕವನ್ನು ಕೆಲವು ತಿಂಗಳುಗಳ ಹೀದೆ ನಾನು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನೋಡಿದ್ದೆ. ಇದು ಸಮಕಾಲೀನ ಸಮಸ್ಯೆಯೊಂದಕ್ಕೆ ಕಲಾ ಮಾಧ್ಯಮವೊಂದು ಪ್ರತಿಕ್ರಿಯಿಸಿದ ರೀತಿ. ಆ ರೀತಿಯ ಗುಣಾತ್ಮಕವಾದ ಪ್ರತಿಕ್ರಿಯೆಯನ್ನು ನಾವು ಮಾಧ್ಯಮದಿಂದ ನಿರೀಕ್ಷಿಸುತ್ತೇವೆ.

ಪ್ರತಿ ಮಹಿಳೆಯೂ ಒಂದಲ್ಲ ಒಂದು ರೀತಿಯಲ್ಲಿ ಲೈಂಗಿಕ ಅತ್ಯಚಾರಕ್ಕೆ ಒಳಗಾಗಿಯೇ ಆಗಿರುತ್ತಾಳೆ. ಅದು ಮಾನಸಿಕವಾಗಿ ಆಗಿರಬಹುದು, ಇಲ್ಲವೇ ದೈಹಿಕವಾಗಿ ಆಗಿರಬಹುದು. ಅದು ಕುಟುಂಬದ ಒಳಗೇ ಆಗಿರಬಹುದು ಅಥವ ಹೊರಗೇ ಅಗಿರಬಹುದು. ಆದರೆ ಆಕೆ ಲೈಂಗಿಕ ಆಟಿಕೆಯಾಗಿರುವುದು ಸತ್ಯ. ಅದನ್ನು ನಾವು ಬಹಿರಂಗವಾಗಿ ಹೇಳಿಕೊಳ್ಳಲಾರೆವು. ಒಂದು ವೇಳೆ ಯಾರದರೂ ಅದನ್ನು ಹೇಳಿಕೊಳ್ಳುವ ದೈರ್ಯ ಮಾಡಿದರೆ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ. ಆಗ ನಡೆಯುವುದೇ ನಿಜವಾದ ಅತ್ಯಚಾರವಾಗುತ್ತದೆ. ಹಾಗಾಗಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅಲ್ಲಿ ಕ್ರೌರ್ಯ ಇತ್ತೋ ಇಲ್ಲವೋ ಗೊತ್ತಾಗುವುದಿಲ್ಲ. ಆದರೆ ಲೈಂಗಿಕ ಲಾಲಸೆಯೇ ಪರಾಕಾಷ್ಠೆಯಲ್ಲಿರುತ್ತದೆ ಎಂಬುದು ಸತ್ಯ. ಹಾಗಾಗಿ ಪುಟ್ಟ ಕಂದಮ್ಮಗಳ ಮೇಲೂ, ಇಳಿ ವಯಸ್ಸಿನವರ ಮೇಲೂ ಅತ್ಯಚಾರ ನಡೆಯುತ್ತದೆ. ಆದರೆ ಸಾಮೂಹಿಕ ಅತ್ಯಚಾರ ನಡೆದಾಗ ಅಲ್ಲಿ ವಿಜೃಂಭಿಸುವುದೇ ಕೌರ್ಯ. ಹಾಗಾಗಿ ಅಲ್ಲಿ ಮೃಗೀಯ ವರ್ತನೆಯಿರುತ್ತದೆ. ತಾವು ಧಾಳಿ ಮಾಡುತ್ತಿರುವುದು ಒಂದು ಜೀವಂತ ಹೆಣ್ಣಿನ ದೇಹದ ಮೇಲೆ, ಅದರಲ್ಲಿಯೂ ಮಿಡಿತವಿದೆ ಎಂಬುದನ್ನವರು ಮರೆತುಬಿಡುತ್ತಾರೆ. ಹಾಗಿಯೇ ಅವಳನ್ನು ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಾರೆ, ಅವಳ ಜನನೇಂದ್ರಿಯಕ್ಕೆ ಕಬ್ಬಿಣದ ಸಲಾಕೆಯನ್ನು ತೂರಿಸುತ್ತಾರೆ. ಹಿಂದೊಮ್ಮೆ ಅಲ್ಲಿಂದಲೇ ತಾವು ಮಾಂಸದ ಮುದ್ದೆಯಂತೆ ಈ ಜಗತ್ತಿಗೆ ಅವತರಿಸಿದ್ದೆವು ಎಂಬುದನ್ನು ಅವರಿಗೆ ತಿಳಿಸಿ ಹೇಳುವವರು ಯಾರು? ಪುರುಷಪ್ರಧಾನವಾದ, ಪುರುಷ ಮನಸ್ಥಿತಿಯ ಪೋಲಿಸ್ ಇಲಾಖೆಯಲ್ಲಿ ಈ ಕಾರ್ಯಕ್ಕೆ ಲಾಠಿಯ ಬಳಕೆಯಾಗುತ್ತದೆ ಅಷ್ಟೇ. ಕ್ರಿಮಿನಲ್ ಕೇಸ್ ಗಳಲ್ಲಿ ಪೋಲಿಸ್ ಠಾಣೆಯಲ್ಲಿ ಅತೀಥ್ಯ ಪಡೆದು ಬಂದ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆತ್ಮೀಯವಾಗಿ ಮಾತಾಡಿಸಿ ನೋಡಿ, ಭೀಕರ ಸತ್ಯಗಳು ಹೊರಬರುತ್ತವೆ!.

ಆದರೆ ಲೈಂಗಿಕ ತಜ್ನರು ಹೇಳುವ ಸತ್ಯ ಬೇರೆಯದೇ ಆಗಿರುತ್ತದೆ. ಅವರು ಹೇಳುತ್ತಾರೆ. ಪುರಷನಿಗಿಂತಲೂ ಸ್ತ್ರೀಯ ಲೈಂಗಿಕ ಕಾಮನೆಗಳು ದುಪ್ಪಟ್ಟಾಗಿರುತ್ತವೆ. ಓಶೋ ತಮ್ಮ ’ಸ್ತ್ರೀ’ ಪುಸ್ತಕದಲ್ಲಿ ಇದಕ್ಕೆ ಸಮರ್ಥನೆಗಳನ್ನು ನೀಡುತ್ತರೆ. ಇದಕ್ಕೆ ವರ್ತಮಾನದಲ್ಲಿ ಪುರಾವೆಗಳು ಸಿಗುತ್ತವೆ. ಒಬ್ಬಳು ವೇಶ್ಯ ದಿನವೊಂದರಲ್ಲಿ ಹತ್ತು ಗಿರಾಕಿಗಳನ್ನಾದರೂ ತೃಪ್ತಿ ಪಡಿಸಬಲ್ಲಳು. ಆದರೆ ಒಬ್ಬ ಗಂಡಸು ಎಷ್ಟು ಜನರನ್ನು ಹಾಸಿಗೆಯಲ್ಲಿ ಗೆಲ್ಲಬಲ್ಲ ಹೇಳಿ? ಆಗ ಅವನಿಗೆ ನೆನಪಾಗುವುದೇ  ರಾಡ್, ಲಾಠಿಗಳು...

ಮೊನ್ನೆ ನನ್ನ ಸ್ನೇಹಿತರೊಬ್ಬರೊಡನೆ ದೆಹಲಿ ಘಟನೆ ಬಗ್ಗೆ ಮಾತಾಡುತ್ತಿದ್ದೆ. ಮಾತಿನ ಮಧ್ಯೆ ಅವರಲ್ಲಿ ಹೇಳಿದೆ. ನೀವು ಗಂಡಸರು ಮಾಡಿದ ಹಾಗೆ ಹುಡುಗಿಯರು ಕೂಡಾ ಮಾಡಿದರೆ ಹೇಗಿರುತ್ತೆ ಸ್ವಲ್ಪ ಕಲ್ಪ್ಪಿಸಿಕೊಳ್ಳಿ; ಒಂದು ಆರೇಳು ಹುಡುಗಿಯರು ಹುಡುಗನೊಭ್ಭನನ್ನು ಅಪಹರಿಸಿ ಅವನ ಬಾಯಿಗೆ ಒಂದೆರಡು ವಯಾಗ್ರ ಮಾತ್ರೆ ತುರುಕಿಸಿ ಅವನನ್ನು ಕಬ್ಬಿನ ರಸ ಹೀರಿದಂತೆ ಹೀರಿ ಬಿಟ್ಟರೆ ಹೇಗಿರುತ್ತೆ? ಎಂದೆ. ಬಿಟ್ಟ ಬಾಯಿ ಬಿಟ್ಟಂತೆ ನಿಂತ ಅವರನ್ನು ನಾನು ಮೈ ಮುಟ್ಟಿ ಎಚ್ಚರಿಸಬೇಕಾಯ್ತು. ವಿದೇಶದಲ್ಲಿ ಎಲ್ಲಿಯೋ ಒಂದು ಪ್ರಕರಣ ಈ ರೀತಿ ನಡೆದದ್ದು ವರದಿಯಾಗಿದ್ದು ಬಿಟ್ಟರೆ ಇನ್ನೆಲ್ಲೂ ನಡೆದಂತಿಲ್ಲ. ಆದ್ರೆ ಮುಂದೆ ನಡೆಯಲಾರದು ಎಂದು ಹೇಳುವುದು ಹೇಗೆ?.ಹಾಗಾಗಿ ನನ್ನ ಪುರುಷ ಸಂಗಾತಿಗಳಲ್ಲಿ ಕೇಳಿಕೊಳ್ಳುವುದಿಷ್ಟೇ; ನಿಮ್ಮ ಉಳಿವಿಗಾಗಿಯಾದರೂ ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಿ.........

  [ ಅವಧಿ ವೆಬ್ ಸೈಟ್ ನಲ್ಲಿ ಪ್ರಕಟವಾದ ಲೇಖನ ]




·          
·          

12 comments:

suragi \ ushakattemane said...

ಪಾರ್ಮೆಟ್ ಚೆಂಜ್ ಆಗಿದೆ. ಕಾಮೆಂಟ್ ಅಪ್ಷನ್ ಓಪನ್ ಆಗ್ತಾ ಇಲ್ಲ. ಹಾಗಾಗಿ ಪ್ರತಿಕ್ರಿಯೆಯನ್ನು ಹಾಕುವವರು ದಯ ಮಾಡಿ ಅವಧಿ ವೆಭ್ ಸೈಟ್ ಗೆ ಹೋಗಿ ಅಲ್ಲಿ ಕಾಮೆಂಟ್ ಹಾಕಿ. ಅಲ್ಲಿ ಈ ಲೇಖನ ದೆಹಲಿ ಘಟನೆಗೆಂದೇ ರೂಪಿಸಲಾದ ವಿಶೇಷ ಸಂಚಿಕೆಯಡಿ ಪ್ರಕಟವಾಗಿದೆ. ಅದರ ಲಿಂಕ್ ನನ್ನ ಬ್ಲಾಗ್ ನ ಬಲಬದಿಯಲ್ಲಿದೆ ಗಮನಿಸಿ..

suragi \ ushakattemane said...

ಅವಧಿಯಲ್ಲಿ ಬಂದ ಪ್ರತಿಕ್ರಿಯೆಗಳು;
Sumathi says:
December 25, 2012 at 7:16 am
ಬದುಕು ಕಟ್ಟಿಕೊಳ್ಳುವುದು ಮತ್ತು ಶೀಲ ಕಳೆದುಕೊಳ್ಳುವುದರ ಮಧ್ಯದ ವತ್ಯಾಸದ ಬಗ್ಗೆ ಮಾತನಾಡಿದ್ದು ಸಕಾಲಿಕ. ಮತ್ತೊ೦ದು ಒಳ್ಳೆಯ ಬರಹ, ಉಷಾ!


SrinidhiRao says:
December 25, 2012 at 8:57 am
ಕೇಳಿದ ಕೇಒಂದೊಂದು ಪ್ರಶ್ನೆಯೂ ಮೌಲ್ಯಯುತವಾದುದ್ದು !!

ಒಂದು ಉತ್ತಮ ಬರಹ ….ಉಷಾ ಅಕ್ಕಾ ..


Anuradha.rao says:
December 25, 2012 at 9:31 am
ಉತ್ತಮ ಬರಹ …ಪುರುಷತ್ವದ ಹರಣ ವಾಗಬೇಕು …ಸರಿಯಾಗಿ ಹೇಳಿದ್ದೀರಿ …ಬದುಕಿಯೂ ಸತ್ತಂತಿರಬೇಕು …


D.Ravivarma says:
December 25, 2012 at 9:38 am
ನನಗೆ ಆ ಪೈಶಾಚಿ ಕೃತ್ಯ ಎಸಗಿರದವರನ್ನು ಸರ್ವಜನಿಕರೆದುರಿಗೆ ನೇತು ಹಾಕಬೇಕು ಅನಿಸುತ್ತಿದೆ…. ಆ ಮೂಲಕ ಮುಂದಿನ ಪೀಳಿಗೆ ಗೊಂದು ಸಾರ್ವಜನಿಕ ಭಯ ಉಂಟಾಗಬೇಕು…. ಈ ಅಮಾನವೀಯ ಕೃತ್ಯ ವನ್ನು ನಮ್ಮ ಸಮಾಜದ ನೇತಾರರು ,ಧರ್ಮದರ್ಶಿಗಳು..ಬುದ್ಧಿಜೀವಿ ವರ್ಗ ,ಯುವಜನಾಂಗ,ಬರಹಗಾರರು ,ಚಿಂತಕರು,ಆರೋಗ್ಯಕರ ಮನಸುಗಳು ಎಲ್ಲರು ಸೇರಿ , ಒಂದು ಹೊಸ ಹೋರಾಟದ ಅಲೆಯನ್ನೇ ಸೃಸ್ತಿಸಬೇಕು… ಆ ಮೂಲಕ ಇಲ್ಲಿಯ ಹೆಂಗಸರು ಬಯವಿಲ್ಲದ ಬದುಕು ಬದುಕಲು .ಆರೋಗ್ಯಕಕರ ವಾತಾವರಣ ಉಂಟುಮಾಡಬೇಕು…….


Roopa says:
December 25, 2012 at 10:19 am
ಒಂದು ವೇಳೆ ಯಾರದರೂ ಅದನ್ನು ಹೇಳಿಕೊಳ್ಳುವ ದೈರ್ಯ ಮಾಡಿದರೆ ಆಕೆಯನ್ನು ಸಮಾಜ ನೋಡುವ ದೃಷ್ಟಿಯೇ ಬದಲಾಗುತ್ತದೆ. ಆಗ ನಡೆಯುವುದೇ ನಿಜವಾದ ಅತ್ಯಚಾರವಾಗುತ್ತದೆ. ಹಾಗಾಗಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ
usha madam idu aksharashaha sathya

suragi \ ushakattemane said...

parna Rao.. says:
December 25, 2012 at 11:16 am
ಇಲ್ಲಿ ಒಂದರ ಮೆಲೊಂದಂತೆ.. ಹಿಂಸಾನುಭವ ಕಥನ ಬರುತ್ತಿರುವಂತೆಯೇ ದಿನ ಪತ್ರಿಕೆಯಲ್ಲಿ ಕ್ರೂರ ಪ್ರಕರಣಗಳು ಪುಂಕಾನುಪುಂಕವಾಗಿ ಹೊರಬರುತ್ತಿವೆ…. ಇಂದಿನದಂತೂ ಓದಿ ಹೊಟ್ಟೆ ಕಿವಿಚುತ್ತಿದೆ… ಏಕೋ ಬರಿ ಇಂತಹ ಜನರೇ ಎಲ್ಲಾಕಡೆ ವೇಷ ಮರೆಸಿಕೊಂಡು ಓಡಾಡುತ್ತಿರುವರೇನೋ ಅನ್ನೋ ಭ್ರಮೆ ಹುಟ್ಟಿಸುತ್ತಿದೆ..


bharathi says:
December 25, 2012 at 12:00 pm
baraha chennagide … thaguluvavarige thagulali antha aase nanage …

suragi \ ushakattemane said...

Praveen Danagoud says:
December 25, 2012 at 12:56 pm
ಹೆಣ್ಣೊ ಒಬ್ಬಳಿಗೆ ಜಾರಣಿ ಎಂಬ ಕಾರಣಕ್ಕೆ ಜನ ಕಲ್ಲಿನಿಂದ ಹೊಡೆಯುತ್ತಾ ಶಿಕ್ಷೆ ಕೊಡುತ್ತಿದ್ದಾಗ ಯೇಸು ಪ್ರಭುಗಳು ದಾವಿಸಿ ನಿಮ್ಮಲ್ಲಿ ಯಾರು ಇಲ್ಲಿಯವರಿಗೆ ತಪ್ಪು ಮಾಡಿಲ್ಲವೊ ಅವರು ಮಾತ್ರ ಹೊಡಿಯಿರಿ ಎಂದರಂತೆ , ಆಗ ಜನ ತಮ್ಮ ಕೈಯಲ್ಲಿ ಇದ್ದ ಕಲ್ಲುಗಳನ್ನು ಕೈಬಿಟ್ಟರಂತೆ , ಆಗಿನ ಜನರಿಗೆ ಅಷ್ಟಾದರು ಆತ್ಮ ಪ್ರಜ್ಞೆಯಿತ್ತು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿತ್ತು ಅದೇ ಯೇಸು 2012 ರ ಕ್ರಿಸ್ ಮಸ್ ಗೆ ಮತ್ತೆ ಜನಿಸಿ ಬಂದು ಅದೇರೀತಿ ಕೇಳದರೆ ನಮ್ಮಲ್ಲಿ ಎಷ್ಟು ಜನ ಆಗೆ ಒಪ್ಪಿಕೊಲ್ಲಬಹುದು ?

“ಈ ಸಮಾಜದ ದುರ್ಗತಿಗೆ ನಾವೇ ಕಾರಣ ! ಏಲ್ಲಿಯವರೆಗೆ ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಸಾಮಾಜದ ಸುಧಾರಣೆ ಕನಸಿನ ಮಾತು !”

ದೆಹಲಿಯಲ್ಲಿ ನಡೆದ ಅತ್ಯಾಚಾರ ಇದಕ್ಕೆ ಹೊರತಲ್ಲ , ಮನುಷ್ಯನಲ್ಲದೆ ಬೇರೆ ಯಾವ ಮೃಗಗಳು ಆ ಬಾಲೆಯ ಮೇಲೆ ಹೀನ ಕೃತ್ಯವೆಸಗಿಲ್ಲ ; ಅಂದಮೇಲೆ ಮಾನವ ಜನ್ಮಕ್ಕೆ ಹೇಸಿಗೆ ಆಗಬೇಕು ಅಲ್ಲವೇ ? ಗಂಡು ಎನಿಸಿದ ನನಗೆ ತಪ್ಪಿತಸ್ತ ಭಾವನೆ ಮೂಡುತ್ತದೆ .

ಅವಳ ಬಿಳಿ ರಕ್ತ ಕಣಗಳು ೬೦೦೦ ಕ್ಕೆ ಇಳಿದಿವೆ , ಪೆಟ್ ಲೆಟ್ ಗಳು ೭೦೦೦೦ ಕ್ಕೆ ಇಳಿದಿವೆ , ವೆನ್ಟಿಲೆಟೆರ್ ಅವಳು ಉಸಿರಾಡುತ್ತಿದ್ದಾಳೆ , ಅವಳ ಕರಳುಗಳನ್ನು ಹೊಟ್ಟೆಇಂದ ಬೇರ್ಪಡಿಸಲಾಗಿದೆ , ಆಕೆ ಇನ್ನು ತಿಂಗಳು ಗಟ್ಟಲೆ ಎನನ್ನು ತಿನ್ನುವಂತಿಲ್ಲಾ .
ಅವಳು ದೈಹಿಕವಾಗಿ ಸುದಾರಿಸಿದರು , ಮಾನಸಿಕವಾಗಿ ಸುದರಿಸಲು ಸಾದ್ಯವೇ ? ಎಲ್ಲರಂತೆ ಬದುಕಲು ಸಾಧ್ಯವೇ ?

ನಾವೆಲ್ಲಾ ಸ್ವಲ್ಪ ರಿಲ್ಯಾಕ್ಸ್ ಆಗ ಬಹುದು ಎಕೆಂದರೆ – ಆಕೆ ನಮ್ಮ ಸ್ವಂತ ಸಹೋದರಿ ಅಲ್ಲವಲ್ಲಾ , ಆದರೆ ಸ್ವಲ್ಪ ವಿಚಾರಿಸಿ ಆ ಸ್ಥಿತಿ ನಮ್ಮ ಸ್ವಂತ ಸಹೊದರಿಗೆ ಆದರೆ ? ಈ ರೀತಿ ಯೋಚಿಸಿದಾಗ ಸದ್ಯಕ್ಕೆ ನಿರ್ಲಿಪ್ತ ಮೌನವೊ ಅಥವಾ ಹೃದಯದಲ್ಲಿ ಕಿಚ್ಚೆದ್ದುಬಿಡಬಹುದು ಆದರೆ ನಾವೀಗ ಏನೇ ಮಾಡಿದರು ಆ ಹೆಣ್ಣು ಮಗು ಮೊದಲಿನಂತಾಗಲು ಸಾದ್ಯವೇ ?

ದೆಹಲಿಯಲ್ಲಿ ಹೀನ ಕೃತ್ಯದ ವಿರುದ್ಧ ನ್ಯಾಯಕ್ಕಾಗಿ ಹೊರಾಡುತಿದ್ದ ವಿಧ್ಯಾರ್ಥಿಗಳ ಗುಂಪಿನಮೇಲೆ ಪೋಲಿಸರು ನಡಿಸಿದ ಹಿಂಸಾಚಾರದಿಂದ ಗಂಟಾಘೋಶವಾಗಿ ಹೇಳಬಹುದು ” ಪೋಲಿಸರು ರಾಜಕಾರಣಿಗಳ ಗುಲಾಮರು ಎಂದು ” ಕೆಲವು ನಿಷ್ಟಾವಂತ ಅಧೀಕಾರಿಗಳನ್ನು ವರೆತುಪಡಿಸಿ ಉಳಿದವರೆಲ್ಲಾ ಕೊಳತ ವಸ್ತುಗಳೇ ಸರಿ .

ಎನೆ ಆಗಲಿ ಹೆಣ್ಣನ್ನು ದೇವತೆ ಎಂದು ಪುಜಿಸಿದ ರಾಮಕೃಷ್ಣ , ವಿವೇಕಾನಂದರ ನಾಡಿನಲ್ಲಿ ಹೀಗೆ ಅಗಬಾರದಿತ್ತು. ಕೊನೆಗೆ ಹೆಣ್ಣನ್ನು ಮಾನವಾಳಗಿ ಆದರು ಬದುಕಲು ಬಿಡಬೇಕಿತ್ತು !!
ಸರ್ಕಾರವಾದರು ಇದನ್ನು ತಡೆಗಟ್ಟುತ್ತದೆ ಎಂಬ ನಂಬಿಕೆಯು ಇಲ್ಲ . ಒಂದು ವಾರದ ನಂತರ ಮೌನಮುರಿದ ಪ್ರಾಧಾನಿಗೆ ನನ್ನ ದಿಕ್ಕಾರ , ಯುವ ಸುಮುಹದಿಂದ ಇನ್ನೊಂದು ದೊಡ್ಡ ದಿಕ್ಕಾರ .
ಭಾರತಾಂಬೆ ಪ್ರಾರ್ಥಿಸುವೆ , ನೀನೆ ನಿನ್ನ ಹೆಣ್ಣು ಮಕ್ಕಳನ್ನು ರಕ್ಷಿಸು !!!!!

suragi \ ushakattemane said...

Mohan V Kollegal says:
December 25, 2012 at 12:59 pm
ಮರಣದಂಡನೆಯನ್ನು ಅತ್ಯುಗ್ರ ಶಿಕ್ಷೆಯೆನ್ನುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಾಗುತ್ತದೆ. ಅಷ್ಟೆಲ್ಲಾ ಹಿಂಸೆ ಕೊಟ್ಟವರು ಏಕ್ ದಂ ಸತ್ತು ಹೋಗುವುದು ಸರಿಯೇ? ಕೊನೆಯ ಆಸೆ ತೀರಿಸುವುದಲ್ಲದೇ, ಐದು ನಿಮಿಷದ ಹಿಂಸೆಯೊಂದಿಗೆ ಆ ವ್ಯಕ್ತಿ ಸಾಯಬಹುದು, ಆದರೆ ಆತನಿಂದ ಹಿಂಸೆಗೊಳಗಾದವರು ಸಾಯುವವರೆವಿಗೂ ಆಗಾಗ ಸಾಯುತ್ತಿರಬೇಕು, ಕಹಿಘಟನೆ ನೆನಪಿಸಿಕೊಂಡು ಕೊರಗಬೇಕು, ಬೆಚ್ಚಬೇಕು. ಆ ಘಟನೆಗೆ ಕಾರಣವಾದವನನ್ನು ಹುಡುಕಿಕೊಂಡು ಮುಖಕ್ಕೆ ಆಗಾಗ ಉಗಿದು ಸ್ವಲ್ಪ ನಿರಾಳಗೊಳ್ಳಲೂ ಆತ ಬದುಕಿರುವುದಿಲ್ಲ.

Reply
Mohan V Kollegal says:
December 25, 2012 at 1:01 pm
ಆದುದರಿಂದ ನೀವು ಹೇಳಿದಂತೆ ಹಂತ ಹಂತವಾಗಿ ಆತ ಸಾಯಬೇಕು, ಕಣ್ಣಿನ ಮುಂದೆ ಹಿಂಸೆಯೆಂದರೇನು ಎಂಬುದು ಗೋಚರಿಸಿಕೊಳ್ಳಬೇಕು…


ಆಸು ಹೆಗ್ಡೆ says:
December 25, 2012 at 1:05 pm
ಉಗ್ರವಾದಿಗಳಲ್ಲಿ, ಭಯೋತ್ಪಾದಕರಲ್ಲಿ ಯಾವ ರೀತಿಯಾಗಿ ಜಾತಿ, ಮತ, ಪಂಗಡಗಳ ಭೇದಭಾವವನ್ನು ತೋರಲಾಗುವುದಿಲ್ಲವೋ, ಅದೇತರಹ ಅತ್ಯಾಚಾರಿಗಳನ್ನು ಅವರದೇ ಒಂದು ವರ್ಗವನ್ನಾಗಿ ಕಾಣಬೇಕಾದ ಅಗತ್ಯ ಇದೆ. ಅತ್ಯಾಚಾರಿಗಳ ಮೇಲಿನ ಕೋಪವನ್ನು ಒಟ್ಟಾರೆ ಪುರುಷವರ್ಗದ ಮೇಲೆ ತೋರಿಸಿಕೊಳ್ಳುವುದು ಅಸಹನೀಯ.
ಇಂಥ ದುರ್ಘಟನೆಗಳಿಗೆ, ದುರಂತಗಳಿಗೆ ನಮ್ಮ ಈ ಸಮಾಜವೇ ಕಾರಣವಾಗಿದೆ ಅನ್ನುವ ಸತ್ಯವನ್ನು ಸ್ವೀಕರಿಸುವ ಮನಸ್ಥಿತಿ ಇಲ್ಲದೇ ಹೋದರೆ, ಪರಿಹಾರ ಕಂಡುಕೊಳ್ಳುವುದು ಕಷ್ಟ ಸಾಧ್ಯ.
ಇಲ್ಲಿ ಲಿಂಗಭೇದ ತೊರುವುದು ಅಸ್ವೀಕಾರಾರ್ಹ. ಅತ್ಯಾಚಾರಿಗಳು ಪುರುಷರೂ ಅಲ್ಲ, ಮಹಿಳೆಯರೂ ಅಲ್ಲ. ಅವರು ರಾಕ್ಷಸರು.
ಹಿಂದಿನ ಪುರಾಣ ಕತೆಗಳಲ್ಲಿ ವಿಚಿತ್ರವಾಗಿ ಚಿತ್ರಿಸಿ ನಮ್ಮ ಕಣ್ಮುಂದೆ ಕಟ್ಟಿಕೊಡುತ್ತಿದ್ದ ಆ ಕೆಟ್ಟ, ಕ್ರೂರ, ದುರುಳ ದಾನವರ ವಂಶಸ್ಥರೇ ಇಂದಿನ ಈ ಅತ್ಯಾಚಾರಿಗಳು.
ಅವರ ನಡವಳಿಕೆಯೇ ಅವರನ್ನು ರಾಕ್ಷಸರನ್ನಾಗಿ ವರ್ಗೀಕರಿಸುವಲ್ಲಿ ಮಾನದಂಡವಾಗುತ್ತದೆ.
ಅದಿಲ್ಲವ್ವಾಗಿದ್ದರೆ, ರಾವಣ ಹಾಗೂ ವಿಭೀಷಣ ಸಹೋದರರೇ ತಾನೆ?
ಆದರೆ ವಿಭೀಷಣನನ್ನು ಯಾರೂ ರಾಕ್ಷಸ ಎನ್ನುವುದೇ ಇಲ್ಲ.

suragi \ ushakattemane said...

ಆಸು ಹೆಗ್ಡೆ says:
December 25, 2012 at 1:18 pm
“ಮೊನ್ನೆ ನನ್ನ ಸ್ನೇಹಿತರೊಬ್ಬರೊಡನೆ ದೆಹಲಿ ಘಟನೆ ಬಗ್ಗೆ ಮಾತಾಡುತ್ತಿದ್ದೆ. ಮಾತಿನ ಮಧ್ಯೆ ಅವರಲ್ಲಿ ಹೇಳಿದೆ. ನೀವು ಗಂಡಸರು ಮಾಡಿದ ಹಾಗೆ ಹುಡುಗಿಯರು ಕೂಡಾ ಮಾಡಿದರೆ ಹೇಗಿರುತ್ತೆ ಸ್ವಲ್ಪ ಕಲ್ಪ್ಪಿಸಿಕೊಳ್ಳಿ; ಒಂದು ಆರೇಳು ಹುಡುಗಿಯರು ಹುಡುಗನೊಭ್ಭನನ್ನು ಅಪಹರಿಸಿ ಅವನ ಬಾಯಿಗೆ ಒಂದೆರಡು ವಯಾಗ್ರ ಮಾತ್ರೆ ತುರುಕಿಸಿ ಅವನನ್ನು ಕಬ್ಬಿನ ರಸ ಹೀರಿದಂತೆ ಹೀರಿ ಬಿಟ್ಟರೆ ಹೇಗಿರುತ್ತೆ? ಎಂದೆ. ಬಿಟ್ಟ ಬಾಯಿ ಬಿಟ್ಟಂತೆ ನಿಂತ ಅವರನ್ನು ನಾನು ಮೈ ಮುಟ್ಟಿ ಎಚ್ಚರಿಸಬೇಕಾಯ್ತು. ವಿದೇಶದಲ್ಲಿ ಎಲ್ಲಿಯೋ ಒಂದು ಪ್ರಕರಣ ಈ ರೀತಿ ನಡೆದದ್ದು ವರದಿಯಾಗಿದ್ದು ಬಿಟ್ಟರೆ ಇನ್ನೆಲ್ಲೂ ನಡೆದಂತಿಲ್ಲ. ಆದ್ರೆ ಮುಂದೆ ನಡೆಯಲಾರದು ಎಂದು ಹೇಳುವುದು ಹೇಗೆ?.ಹಾಗಾಗಿ ನನ್ನ ಪುರುಷ ಸಂಗಾತಿಗಳಲ್ಲಿ ಕೇಳಿಕೊಳ್ಳುವುದಿಷ್ಟೇ; ನಿಮ್ಮ ಉಳಿವಿಗಾಗಿಯಾದರೂ ನಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಿ………”

ಇಂಥ ಘಟನೆಗಳೂ ನಡೆಯುತ್ತಿವೆ. ನೆನಪಿನಲ್ಲಿರುವುದು ಉತ್ತರಾಂಚಲದಲ್ಲಿ ಕೆಲವೇ ತಿಂಗಳುಗಳ ಹಿಂದೆ ನಡೆದಿದೆಯೆನ್ನಲಾದ ಘಟನೆ. ಆದರೆ, ಈ ಘಟನೆಗಳಿಗೆ ಅಷ್ಟೊಂದು ಪ್ರಚಾರ ಸಿಗುವುದಿಲ್ಲ ಅನ್ನುವುದೂ ಸತ್ಯ. ಇದಕ್ಕೆ ಕಾರಣ, ಬಹುಶಃ ತಾವೇ ಹೇಳುವ ಹಾಗೆ, ಪುರುಷ ಕಳೆದುಕೊಳ್ಳುವುದು ಏನೂ ಇಲ್ಲ. ಕಳೆದು ಕೊಳ್ಲುವುದು ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಾತ್ರ ಅನ್ನುವ ಮನೋಭಾವನೆ ಇರಬಹುದೇನೋ.


shashi says:
December 25, 2012 at 3:48 pm
Madam what you we agree for that……………


srujana says:
December 25, 2012 at 6:06 pm
ಅಸು ಹೆಗ್ಡೆ ಅವರು ಹೇಳುವ ಮಾತಿಗೆ ನನ್ನ ಸಹಮತವಿದೆ .ಇಂತಹ ಕೃತ್ಯ ನಡೆದಾಗ ಇಡಿ ಪುರುಷ ವರ್ಗ ವನ್ನೇ ನಿಂದಿಸುವುದು ಸರಿಯಲ್ಲ .ಇನ್ನು ನಮ್ಮ ಮನೆಯಲ್ಲಿಯೂ ಅಣ್ಣ ತಮ್ಮ .ತಂದೆ ಮಗ ಎಲ್ಲರು ಇರುತ್ತಾರೆ ಅವರೆಲ್ಲ ಎಷ್ಟು ಸುಶಿಕ್ಷಿತರಾಗಿ ಇರುತ್ತಾರೆ .ಇಂತಹ ಕೃತ್ಯ ಮಾಡಿದವರು ಪೈಶಾಚಿಕರು ಅವರಿಗೆ ತುಂಬಾ ಘೋರ ಶಿಕ್ಷೆ ಆಗಲೇಬೇಕು .ಇನ್ನೊಂದು ವಿಷಯ ಉಷಾ ಅವರೇ ಈ ದೃಶ್ಯ ಮಾದ್ಯಮಗಳು ಎಷ್ಟರ ಮಟ್ಟಿಗೆ ಕಾರಣ ಎಂಬುವುದರಲ್ಲಿ ನನಗೆ ಸ್ವಲ್ಪ ಗೊಂದಲಗಳಿವೆ ಯಾಕಂದರೆ ಅಲ್ಲಿ ಯಾವ ಹೆಣ್ಣು ಮಗಳೂ ತಾನು ಇಂತಹ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದರೆ ಅಂತಹ ಪಾತ್ರಗಳು ಕಾಣಲು ಸಾದ್ಯವಿಲ್ಲ .ಹಣದ ಮುಖ ನೋಡಿ ಯಾವ ಪಾತ್ರ ಆದರೂ ಮಾಡಲು ತಯಾರಿರುವಾಗ ಇಂತಹ ದೃಶ್ಯಗಳು ನಮಗೆ ಕಾಣಲು ಸಿಗುತ್ತವೆ ಉದಾಹರಣೆಗೆ ಒಂದು ಕಾರ್ಯಕ್ರಮವನ್ನು ನಡೆಸಿಕೊಡಲು ಒಂದು ಹುಡುಗ ಹಾಗು ಒಂದು ಹುಡುಗಿ ಇರುತ್ತಾರೆ ಅದರಲ್ಲಿ ಹುಡುಗನ ಡ್ರೆಸ್ ಪ್ಯಾಂಟ್ -ಶರ್ಟ್ ಅದರ ಮೇಲೊಂದು ಕೋಟು ಅದೇ ಹುಡುಗಿಯ ಡ್ರೆಸ್ ಹೆಚ್ಚಿನಂಶ ಒಂದು ಮೀಟರ್ ಬಟ್ಟೆ ಸಾಕಾಗುತ್ತೆ ಅನ್ಸುತ್ತೆ ಆವಾಗ ನನಿಗೆ ಅನಿಸುತ್ತೆ ಇವರು ಯಾಕೆ ಹೀಗೆ ಇರುತ್ತಾರೆ ಅಂತ .

suragi \ ushakattemane said...

shivashankar says:
December 26, 2012 at 12:54 pm
words fail to condemn this heinous crime
Rightly said, castration should be the answer for the offenders
In Uttar Pradhesh a womens group called gulabi gang are cutting off the male generials of the Rapist, this was broadcast on tv9 on 23rd December 2012

I recollect a film about a decade back, dimple kapadi as a police inspector does this secretly. She goes in search of the rapists and castrate them

In our own mythology the king of devatas, Indra makes an immoral act with the wife of a Rishi, the Rishi Curses him and makes his entire body look like females reproductive organ.

Yes, I strongly feel the rapists should be castrated and they should suffer for the rest of their life

Unknown said...
This comment has been removed by the author.
Unknown said...

Nimma baraha tumba chennagide madam

nivu helo riti purushatva harana tumba kasta ide

nimage gottirabahudu namma rajakarinigalige adestu kade sambadha ideyo, aa taraha noduvudadre first avara "purushatva harana" shastra kriyage olagagabekagutte

hennina mele tumba hatyachara modalinindalu nadeyutta ide adakke spashta udaharane ramayana mahabharata

ondu hinnele, choukatti nalli nodidare hennina maanabhanga moduvudu onde, sarvanaashakke munnudi bareyuvudu onde

udahanege drupadiya maana nashtakke pratiyaagi kaurava kula naasha

and another best suited example is
Rajastan lli tumba hennu bruna hatye nadita ide adara prati yaagi
ivattu allina jana ondu bindige neerigu myli gattale nadiya bekagide but ee paristiti 200 hundred years back iralilla kaarana
hennu brunagala shaapa
ade rajastani galu namma karntaka banda karana same bruna hatye illu jotege nam rajyadalli kole, rape,mosa hechchagta ide karana

hennina shaapa

every thing is interlinked


hennannu gandu yavudakkella kalpane maadi vyakyana kodtane
taayui, tangi, friend, preyasi, guide, philosopher adaru ade gandassu sex na saluvaagi estu amaniyavaagi vartisuttane


so naanu enu helodu andre hennina mele dourjanya nilluva tanaka yavude taraha shanti, nemmadi, sukha, samruddi sigodilla idu
katu satya

hennina shapakke ondu dina bhumi sarvanaasha addaru adu kadime shiksheye

ಕಾವ್ಯಾ ಕಾಶ್ಯಪ್ said...

’ಪರಿಸರ ವ್ಯಕ್ತಿತ್ವವನ್ನು ರೂಪಿಸುತ್ತದೆ' ಇದನ್ನ ನಾನೂ ೧೦೦% ಒಪ್ಪಿಕೊಳ್ಳುತ್ತೇನೆ. ಮಕ್ಕಳಿಗೆ ನಾವು ಕೋಡುಬ ಸಂಸ್ಕಾರವೇ ಕೊನೆ ವರೆಗಿನ ಅವರ ವ್ಯಕ್ತಿತ್ವಕ್ಕೆ ಕಾರಣವಾಗುತ್ತದೆ.
ನೀವು ಹೇಳಿದಂತೆ ಇಂತಹ ಮೃಗೀಯ ವರ್ತನೆ ಗಳಿಗೆ, ಸಮಾಜದಲ್ಲಿ ರೌಡಿಸಂ ಜಾಸ್ತಿ ಆಗುತ್ತಿರುವುದಕ್ಕೆ ಮೀಡಿಯಾ ಗಳ ಕೊಡುಗೆ ಅಪಾರ. ಅಲ್ಲಿ ತೋರಿಸುವ ದೃಶ್ಯಗಳೇ ಜನರನ್ನು ಪ್ರೇರೇಪಿಸುತ್ತದೆ ಎಂಬುದು ನನ್ನ ಅನಿಸಿಕೆಯೂ ಕೂಡ...
ಇನ್ನು ನೀವು ಹೇಳಿದಂತೆ ಇಂತಹ ಮೃಗೀಯ ಕೃತ್ಯ ಎಸಗಿದವರಿಗೆ ಅವರ 'ಆಯುಧ' ಹರಣವೇ ಅತ್ಯುಗ್ರ ಶಿಕ್ಷೆ.... ಇನ್ನು ಮುಂದೆ ಪ್ರತಿ ಹೆಣ್ಣನ್ನು ನೋಡಿದಾಗಲೂ ಅಂತವರು ಸಾಯಬೇಕು....!!
ತುಂಬಾ ಪ್ರಭಾವಕಾರಿ ಲೇಖನ... ಪ್ರತಿ ಸಾಲು ತುಂಬಾ ಮನ ಕಲಕಿತು....

suragi \ ushakattemane said...

Aravinda says:
December 28, 2012 at 1:04 pm
ಕೇವಲ ಪುರುಷತ್ವ ಹರಣ ಮಾಡುವುದು ಮಾತ್ರವಲ್ಲ ಆಯಾ ಅತ್ಯಾಚಾರಿಗಳಿರುವ ನಗರ ಪಟ್ಟಣದ ಸ್ಥಳೀಯ ಪತ್ರಿಕೆಗಳಲ್ಲಿ ಆಯಾ ಅತ್ಯಾಚಾರಿಯ ವೆಚ್ಚದಲ್ಲಿ ಆ ವ್ಯಕ್ತಿಯು ಅತ್ಯಾಚಾರಿ ಎಂದು ಜಾಹೀರಾತಿನ ರೀತಿಯಲ್ಲಿ ಪ್ರಕಟವಾಗಬೇಕು. ಆಗ ಮಾನ ಮರ್ಯಾದೆಗೆ ಕೂಡಾ ಅಂಜದ ವ್ಯಕ್ತಿಗಳೂ ಇಂತಹಾ ಹೀನ ಕೃತ್ಯ ಮಾಡುವ ಮುಂಚೆ ಸ್ವಲ್ಪ ಯೋಚಿಸುವ ಹಾಗಾಗುತ್ತದೆ

suragi \ ushakattemane said...

Beluru Raghunandan says:
December 31, 2012 at 7:14 pm
Kandalli nugguva gooli….. Hennu sigadiddare gandaadaru ayitu…. Konege praniyadaru ok……..adhinikateya vividha maggulugalannu ee maatugalu spastapadisuttale indina vikaarategalannu …., bere complex galannu yochanege hattikkuttave…bhogada pradhaanyteya parichyavaguttale nirnaamada dikkugalannu toruttade….. Ishtara naduve kamakke kannilla annuva maatannu matte eduru haakikondu uttaragala hudukuvante maduttave,,,,,,,, olleya baraha madam…..englishinalli kettiruvudakke kshameyirali……