ಸೃಜನಶೀಲ ಪ್ರಕ್ರಿಯೆಯಲ್ಲಿವೈಯಕ್ತಿಕ
ಮತ್ತು ಸಾರ್ವತ್ರಿಕ ಸಂವಹನ ಹೇಗೆ?
ಸೃಜನಶೀಲ ಪ್ರಕ್ರಿಯೆಯಲ್ಲಿ
ವೈಯಕ್ತಿಕ ಅನುಭವಗಳು ಸಾರ್ವತ್ರಿಕ ಅನುಭವಗಳಾಗಿ ರೂಪಾಂತರಗೊಳ್ಳುವುದು ಬಲು ಸೋಜಿಗದ ಮತ್ತು ಕುತೂಹಲಕಾರಿಯಾದ ವಿಚಾರ.
ಬರಹಗಾರ ಅಥವಾ ಕಲಾಕಾರರು
ತಾವು ಬದುಕಿನಲ್ಲಿ ನೋಡಿದ್ದು, ಅನುಭವಿಸಿದ್ದು, ಕನಸು ಕಂಡಿದ್ದು, ಸದಾ ಕಾಲ ಕಾಡಿದ್ದು, ಇದೆಲ್ಲವನ್ನೂ
ಕಲಾ ರೂಪಕ್ಕೆ ತಂದಾಗ ಅದು ಸಾರ್ವತ್ರಿಕವಾಗುತ್ತದೆ. ಆಗ ಓದುಗ ಅಥವಾ ಕಲಾರಸಿಕ ಅದು ತನ್ನದೇ ಅನುಭವವೆಂಬಂತೆ
ಪರಿಭಾವಿಸುತ್ತಾನೆ. ಆ ಕಲಾಕೃತಿ ತನ್ನೊಳಗಿನ ಪ್ರತಿಬಿಂಬ ಎಂದು ಭಾವಿಸಿ ಅದನ್ನು ಸೃಷಿಸಿದಾತನ ಮೇಲೆ
ಪ್ರೀತಿ ಮತ್ತು ಗೌರವವನ್ನು ತಾಳುತ್ತಾನೆ. ಇದು ಒಂದು ಕಲೆಗೆ ಮತ್ತು ಕಲಾಕಾರನಿಗೆ ಸಂದ ಗೌರವವಾಗುತ್ತದೆ.
ಸತ್ಯ ಮತ್ತು ಸೌಂದರ್ಯಗಳಂತ ಅಮೂರ್ತ ವಿಚಾರಗಳನ್ನು ಸಾರ್ವತ್ರಿಕಗೊಳಿಸಬೇಕಾದರೆ
ವೈಯಕ್ತಿಕ ಅನುಭವಗಳ ಮುಖಾಂತರ ಹೇಳಿದರೆ ಅದು ಓದುಗನ ಅಥವಾ ನೋಡುಗನ ಮನಸನ್ನು ಬೇಗನೆ ತಟ್ಟುತ್ತದೆ.
ವೈಯಕ್ತಿಕ ಅನುಭವಗಳನ್ನು ಪ್ರತಿಮೆಗಳ ಮೂಲಕ ಹೇಳಿದಾಗ
ಕೃತಿ ಆಳವನ್ನು ಪಡೆಯುತ್ತದೆ.
ಒಂದು ಕೃತಿಯಲ್ಲಿ
ಕೃತಿಕಾರನ ವೈಯಕ್ತಿಕ ಅನುಭವ ಹೇಗೆ ಸಾರ್ವತ್ರಿಕವಾಗಿ ರೂಪಾಂತರಗೊಂಡಿದೆ ಎಂಬುದು ಒಬ್ಬ ಸೂಕ್ಷ್ಮ
ಓದುಗನಿಗೆ, ಕೇಳುಗನಿಗೆ ಅಥವಾ ನೋಡುಗನಿಗೆ ಗೊತ್ತಾಗುತ್ತದೆ. ಹಾಗಾಗಿ ಆತ ಅದು ತನ್ನದೇ ಬದುಕಿನ ಭಾಗವೆಂಬಂತೆ
ಭಾವಿಸುತ್ತಾನೆ. ಹಾಗೆ ಆದಲ್ಲಿ ಅದು ಕೃತಿಯ ಗೆಲುವು.
0 comments:
Post a Comment